ಬೆಂಗಳೂರು: ಭಯ ಬೇಡ, JN.1ನಿಂದ ಯಾವುದೇ ಹೈ ರಿಸ್ಕ್ ಇಲ್ಲ, ಕೋವಿಡ್ ಹೊಸ ಮಾರ್ಗ ಸೂಚಿ ಬಿಡುಗಡೆ

ಬೆಂಗಳೂರು: ಭಯ ಬೇಡ, JN.1ನಿಂದ ಯಾವುದೇ ಹೈ ರಿಸ್ಕ್ ಇಲ್ಲ, ಕೋವಿಡ್ ಹೊಸ ಮಾರ್ಗ ಸೂಚಿ ಬಿಡುಗಡೆ

ಬೆಂಗಳೂರು: ಆತಂಕ ಬೇಡ, ಭಯಬೇಡ, ಕೋವಿಡ್ ನ ಹೊಸ ರೂಪಾಂತರ jn.1 ನಿಂದ ಯಾವುದೇ ಹೈ ರಿಸ್ಕ್ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು. 

ಮಂಗಳವಾರ ಬೆಂಗಳೂರಿನ ವಿಧಾನಸೌಧದಲ್ಲಿ ಕೋವಿಡ್ ಕುರಿತು ಹೊಸ ಮಾರ್ಗ ಸೂಚಿ ಮತ್ತು ಮುನ್ನೆಚ್ಚರಿಕೆ ಕಾರ್ಯಕ್ರಮಗಳ ಬಗ್ಗೆ ಸಭೆ ನಡೆಸಿದ ಬಳಿಕ ಸುತ್ತಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷದ ಸಂಭ್ರಮಕ್ಕೆ ಯಾವುದೇ ನಿರ್ಬಂಧ ಇಲ್ಲ, ಆದರೆ ಹೆಚ್ಚು ಜನ ಜಂಗುಳಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ ಹಾಗೂ ಕೋವಿಡ್ ಮುನ್ನೆಚ್ಚರಿಕೆ ಕಾರ್ಯಕ್ರಮಗಳನ್ನು ಪಾಲಿಸುವುದು ಉತ್ತಮ ಎಂದು ಹೇಳಿದರು. ಹಾಗೂ ವೈದ್ಯಕೀಯ ರಂಗದಲ್ಲಿ ಕೆಲಸ ಮಾಡುವವರಿಗೆ ಫ್ಲು ಡೋಸ್ ಮತ್ತು ಸಾಮಾನ್ಯ ಜನರಿಗೆ precautionary (ಪ್ರಿಕಾಷನರಿ) ಡೋಸ್ ನೀಡುವುದಾಗಿ ಹೇಳಿದರು.