15 ವರ್ಷ ಮೇಲ್ಪಟ್ಟ ವಾಹನಗಳ 'ಫಿಟ್ನೆಸ್ ಸರ್ಟಿಫಿಕೆಟ್' ಶುಲ್ಕ 16 ಪಟ್ಟು ಹೆಚ್ಚಳ!

ಬೆಂಗಳೂರು: ಹಳೆಯ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆಯು ಬಿಗ್ ಶಾಕ್ ನೀಡಿದೆ. ಹೌದು, 15 ವರ್ಷ ಮೇಲ್ಟಟ್ಟ ವಾಹನಗಳ ಫಿಟ್ನೆಸ್ ಸರ್ಟಿಫಿಕೆಟ್ ಪರಿಷ್ಕೃತ ಶುಲ್ಕವನ್ನು 16 ಪಟ್ಟು ಹೆಚ್ಚಳ ಮಾಡಲಾಗಿದೆ. ಟ್ರಾನ್ಸ್ ಪೋರ್ಟ್ ವಾಹನಗಳಿಗೆ 8 ವರ್ಷಗಳವರೆಗೆ ಪ್ರತಿ ಎರಡು ವರ್ಷಕ್ಕೆ ಒಂದು ಬಾರಿ ಫಿಟ್ನೆಸ್ ಸರ್ಟಿಫಿಕೆಟ್ ಕಡ್ಡಾಯ ಮಾಡಲಾಗಿದೆ. 8 ವರ್ಷಗಳ ನಂತರ ವರ್ಷಕ್ಕೆ ಒಂದು ಸಲ ಫಿಟ್ನೆಸ್ ಸರ್ಟಿಫಿಕೆಟ್ ಕಡ್ಡಾಯವಾಗಿದೆ ಎನ್ನಲಾಗಿದೆ. ಪರಿಷ್ಕೃತ ಶುಲ್ಕವನ್ನು ಬಿಡುಗಡೆ ಮಾಡಿರುವ ಸಾರಿಗೆ ಇಲಾಖೆ, 15 ವರ್ಷ ಮೇಲ್ಪಟ್ಟ ಸಾರ್ವಜನಿಕ ಪ್ರಯಾಣಿಕರ ವಾಹನಗಳ ಫಿಟ್ನೆಸ್ ಸರ್ಟಿಫಿಕೆಟ್ ಪರಿಷ್ಕೃತ ಶುಲ್ಕವನ್ನು 16 ಪಟ್ಟು ಏರಿಕೆ ಮಾಡಲಾಗಿದೆ. ಖಾಸಗಿ ವಾಹನಗಳ ಆರ್.ಸಿ ನವೀಕರಣ ಶುಲ್ಕ ಕೂಡ ಹೆಚ್ಚಳ ಮಾಡಲಾಗಿದೆ.