ಮಂಗಳವಾರ ಷೇರುಪೇಟೆಯಲ್ಲಿ ಫ್ಲ್ಯಾಟ್‌ ವಹಿವಾಟು, ಅಪ್ಪರ್‌ ಸರ್ಕ್ಯೂಟ್‌ನಲ್ಲಿವೆ ಹಲವು ಪೆನ್ನಿ ಷೇರುಗಳು

ಮಂಗಳವಾರ ಷೇರುಪೇಟೆಯಲ್ಲಿ ಫ್ಲ್ಯಾಟ್‌ ವಹಿವಾಟು, ಅಪ್ಪರ್‌ ಸರ್ಕ್ಯೂಟ್‌ನಲ್ಲಿವೆ ಹಲವು ಪೆನ್ನಿ ಷೇರುಗಳು

ಮಂಗಳವಾರ ಬೆಳಿಗ್ಗೆ 10:25ಕ್ಕೆ ಬಿಎಸ್‌ಇ ಸೆನ್ಸೆಕ್ಸ್ ಶೇ. 0.03ರಷ್ಟು ಅಲ್ಪ ಏರಿಕೆ ಕಂಡು 59,304 ಮಟ್ಟವನ್ನು ತಲುಪಿತ್ತು. ನಿಫ್ಟಿ 50 ಸೂಚ್ಯಂಕವು ಶೇ. 0.05ರಷ್ಟು ಏರಿಕೆ ದಾಖಲಿಸಿ 17,401 ಮಟ್ಟವನ್ನು ಮುಟ್ಟಿತ್ತು. ಸೆನ್ಸೆಕ್ಸ್‌ನಲ್ಲಿ ಮಹೀಂದ್ರಾ & ಮಹೀಂದ್ರಾ, ಟಾಟಾ ಮೋಟಾರ್ಸ್ ಮತ್ತು ಬಜಾಜ್ ಫಿನ್‌ಸರ್ವ್ ಗರಿಷ್ಠ ಗಳಿಕೆ ದಾಖಲಿಸಿದ್ದರೆ, ಐಟಿಸಿ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಸ್ಟೀಲ್ ಹೆಚ್ಚಿನ ನಷ್ಟಕ್ಕೀಡಾಗಿದ್ದು, ಮಾರುಕಟ್ಟೆಯನ್ನೂ ಕೆಳಕ್ಕೆಳೆದಿವೆ.

ವಿಶಾಲ ಸೂಚ್ಯಂಕಗಳು ಮುಖ್ಯ ಸೂಚ್ಯಂಕಗಳನ್ನು ಮೀರಿಸಿವೆ. ಬಿಎಸ್‌ಇಯಲ್ಲಿ 1,726 ಷೇರುಗಳು ಏರಿಕೆ ಮತ್ತು 1,292 ಷೇರುಗಳು ಕುಸಿತ ಕಾಣುವುದರೊಂದಿಗೆ ಏರಿಕೆ-ಇಳಿಕೆಯ ಅನುಪಾತವು ಇನ್ನೂ ಏರಿಕೆ ಪರವಾಗಿಯೇ ಇದೆ.

ಬಿಎಸ್‌ಇ ಸ್ಮಾಲ್‌ಕ್ಯಾಪ್‌ನಲ್ಲಿ ಗರಿಷ್ಠ ಗಳಿಕೆ ದಾಖಲಿಸಿರುವ ತ್ರಿವೇಣಿ ಟರ್ಬೈನ್ ಲಿ.ನ ಷೇರುಗಳು ಶೇ. 9ಕ್ಕಿಂತ ಹೆಚ್ಚು ಏರಿಕೆ ಕಂಡಿದ್ದು ಹೊಸ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಫೋಸೆಕೊ ಇಂಡಿಯಾ ಲಿಮಿಟೆಡ್ ಮತ್ತು ಯುಫ್ಲೆಕ್ಸ್ ಲಿಮಿಟೆಡ್ ಷೇರುಗಳು ಸಹ ಭಾರೀ ಪ್ರಮಾಣದಲ್ಲಿ ಖರೀದಿಗೆ ಒಳಪಟ್ಟಿವೆ.