IPL 2024 | RCBvsRR: ಕೊಹ್ಲಿ ಶತಕದ ಅಬ್ಬರ - ರಾಜಸ್ಥಾನಕ್ಕೆ 184 ರನ್‌ಗಳ ಗುರಿ ನೀಡಿದ ಆರ್‌ಸಿಬಿ

ಜೈಪುರ್: ವಿರಾಟ್ ಕೊಹ್ಲಿ ಶತಕ, ನಾಯಕ ಫಾಫ್ ಡು ಪ್ಲೆಸ್ಸಿಸ್ ಉತ್ತಮ ಆರಂಭದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 184 ರನ್‌ಗಳ ಗುರಿ ನೀಡಿದೆ.
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಐಪಿಎಲ್ 2024ರ ಭಾಗವಾಗಿ ಇಂದು ನಡೆಯುತ್ತಿರುವ 19ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 3 ವಿಕೆಟ್ ನಷ್ಟಕ್ಕೆ183 ರನ್ ಗಳಿಸಿದೆ. ತಂಡದ ಪರ ವಿರಾಟ್ ಕೊಹ್ಲಿ 113 ರನ್ (72 ಎಸೆತ, 12 ಬೌಂಡರಿ, 4 ಸಿಕ್ಸ್), ಫಾಫ್ ಡು ಪ್ಲೆಸ್ಸಿಸ್ 44 ರನ್ (33 ಎಸೆತ) ಗಳಿಸಿದರು.