ಬಾಂಗ್ಲಾದಲ್ಲಿ ಸೈಕ್ಲೋನ್ ಅಬ್ಬರ, ಈಶಾನ್ಯ ರಾಜ್ಯಗಳಲ್ಲಿ ಹೈ ಅಲರ್ಟ್

ಬಾಂಗ್ಲಾದೇಶದಲ್ಲಿ ಸಿತ್ರಾಂಗ್ ಸೈಕ್ಲೋನ್ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಚಂಡಮಾರುತದ ಅಬ್ಬರಕ್ಕೆ ಭಾರತದ ನೆರೆಯ ದೇಶ ತತ್ತರಿಸಿ ಹೋಗಿದೆ. ಸಾವು-ನೋವುಗಳು ಸಂಭವಿಸಿವೆ. ಮನೆ ಮಠಗಳು ಧೂಳೀಪಟವಾಗಿವೆ. ಸಾಗರದ ಅಲೆಗಳ ಆರ್ಭಟಿಸುತ್ತಿವೆ. ಭಾರತಕ್ಕೂ ಸಿತ್ರಾಂಗ್‌ನ ಎಫೆಕ್ಟ್ ತಟ್ಟಿದೆ.
ಬಾಂಗ್ಲಾದೇಶದ ಕರಾವಳಿಗೆ ಸಿತ್ರಾಂಗ್ ಚಂಡಮಾರುತ ಅಪ್ಪಳಿಸಿದೆ. ಬಂಗಾಳಕೊಲ್ಲಿಯಲ್ಲಿ ವಾರದಿಂದ ಹಿಂದೆ ಹವಾಮಾನ ವೈಪರೀತ್ಯದಿಂದ ಸೃಷ್ಟಿಯಾಗಿದ್ದ ‘ಸಿತ್ರಾಂಗ್’ ಸೈಕ್ಲೋನ್ ಇವತ್ತು ಬೆಳಗ್ಗೆ ಬಾಂಗ್ಲಾದ ಈಶಾನ್ಯ ದಿಕ್ಕನ್ನು ಪ್ರವೇಶಿಸಿದೆ. ತಿಂಕೋನಾ ದ್ವೀಪದ ಕಡಲ ತೀರಕ್ಕೆ ಇದು ಅಪ್ಪಳಿಸಿದೆ. ಸಿತ್ರಾಂಗ್ ಚಂಡಮಾರುತದ ಅಬ್ಬರಕ್ಕೆ ಇಡೀ ಬಾಂಗ್ಲಾದೇಶವೇ ತತ್ತರಿಸಿ ಹೋಗಿದೆ. ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ.
ಡಾಕಾದಲ್ಲಿ ಗಾಳಿ ಸಹಿತ ಮಳೆಯ. ಆರ್ಭಟಕ್ಕೆ ದೊಡ್ಡ ದೊಡ್ಡ ಮರಗಳೇ ದರಾಶಾಹಿಯಾಗಿವೆ. ಡಾಕಾದ ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ಜನರು ಸಂಚಾರ ಮಾಡಲು ಪರದಾಡುವಂತಾಗಿದೆ.
ಸಿತ್ರಾಂಗ್ ಆರ್ಭಟಕ್ಕೆ ಬಾಂಗ್ಲಾದಲ್ಲಿ ಈವರೆಗೂ 9 ಮಂದಿ ಸಾವನ್ನಪ್ಪಿದ್ದಾರೆ. ಬರ್ಗುನಾ, ನರೈಲ್, ಭೋಲ್ ದ್ವೀಪಸಿರಾಜ್‌ಗಂಜ್‌ನಲ್ಲಿ ಸಾವುಗಳು ಸಂಭವಿಸಿರೋ ವರದಿಯಾಗಿದೆ. ಇನ್ನೂ ಕರಾವಳಿ ಭಾಗದ 10 ಲಕ್ಷಕ್ಕೂ ಹೆಚ್ಚು ಮಂದಿಯನ್ನ ಬೇರೆಡೆ ಸ್ಥಳಾಂತರ ಮಾಡಲಾಗಿದೆ.