ಬ್ರೇಕಿಂಗ್‌ : ದರ್ಶನ್‌ ಜಾಮೀನು ಅರ್ಜಿ ರದ್ದು... ತೀರ್ಪು ಪ್ರಕಟ

ಬ್ರೇಕಿಂಗ್‌ : ದರ್ಶನ್‌ ಜಾಮೀನು ಅರ್ಜಿ ರದ್ದು... ತೀರ್ಪು ಪ್ರಕಟ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಮತ್ತು ಇತರ ಆರೋಪಿಗಳಿಗೆ ಜಾಮೀನು ನೀಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ. ದರ್ಶನ್ ಅವರ ಜಾಮೀನನ್ನು ರದ್ದುಗೊಳಿಸಿ ಆದೇಶ ನೀಡಿದೆ. ಈ ಮೂಲಕ ದರ್ಶನ್‌ಗೆ ಬಿಗ್ ಶಾಕ್ ನೀಡಿದೆ. ಹೀಗಾಗಿ ಚಾಲೆಂಜಿಂಗ್‌ ಸ್ಟಾರ್‌ಗೆ ಮತ್ತೆ ಜೈಲೇ ಗತಿಯಾಗಲಿದೆ. ದರ್ಶನ್ ಜೊತೆ ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳೂ ಕಂಬಿ ಎಣಿಸಬೇಕಿದೆ.