ಮಾರ್ಚ್-28-29 ರಾಷ್ಟ್ರವ್ಯಾಪಿ ಬ್ಯಾಂಕ್ ಬಂದ್

ಮಾರ್ಚ್-28-29 ರಾಷ್ಟ್ರವ್ಯಾಪಿ ಬ್ಯಾಂಕ್ ಬಂದ್

ನವದೆಹಲಿ: ಮಾರ್ಚ್ ಕೊನೆ ವಾರದಲ್ಲಿ ನೀವು ಬ್ಯಾಂಕ್ ಕೆಲಸ ಏನಾದ್ರೂ ಇಟ್ಟುಕೊಂಡಿದ್ದೀರಾ ? ಹಾಗಾದರೆ ಮೂರನೇ ವಾರದಲ್ಲಿಯೇ ಎಲ್ಲವನ್ನೂ ಪೂರ್ಣಗೊಳಿಸಿಕೊಳ್ಳುವುದು ಒಳ್ಳೆಯದು.ಕಾರಣ, ಮಾರ್ಚ್-28 ಮತ್ತು 29 ಕ್ಕೆ ರಾಷ್ಟ್ರ ವ್ಯಾಪಿ ಬ್ಯಾಂಕ್ ಬಂದ್ ಆಗುತ್ತಿವೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣ ಮತ್ತು ಬ್ಯಾಂಕ್ ಕಾನೂನು ತಿದ್ದುಪಡಿ ಮಸೂದೆ 2021 ವಿರೋಧಿಸಿಯೇ ಬ್ಯಾಂಕ್ ಯುನಿಯನ್ ಎರಡು ದಿನ ಮುಷ್ಕರ ಕರೆದಿದೆ. ವಾರಾಂತ್ಯದಲ್ಲಿ ಬ್ಯಾಂಕ್ ಮುಚ್ಚುತ್ತವೆ. ವಾರದ ಆರಂಭ ಸೋಮವಾರ ಮತ್ತು ಮಂಗಳವಾರ ಮುಷ್ಕರ ಇದೆ. ಅಲ್ಲಿಗೆ ಬರೋಬ್ಬರಿ ನಾಲ್ಕು ದಿನ ಬ್ಯಾಂಕ್ ಸೇವೆ ಇರೋದಿಲ್ಲ. ಇನ್ನು ಬಂದ್ ವಿಚಾರದ ಬಗ್ಗೆ ಎಸ್.ಬಿ.ಐ ಈಗ ಮಾಹಿತಿ ಕೊಟ್ಟಿದೆ.