ಬೆಂಗಳೂರು : 2019ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಕಟ - ಕಿಚ್ಚ ಸುದೀಪ್ ಅತ್ಯುತ್ತಮ ನಟ, ಅನುಪಮ ಗೌಡ ಅತ್ಯುತ್ತಮ ನಟಿ

ಬೆಂಗಳೂರು : 2019ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಕಟ - ಕಿಚ್ಚ ಸುದೀಪ್ ಅತ್ಯುತ್ತಮ ನಟ, ಅನುಪಮ ಗೌಡ ಅತ್ಯುತ್ತಮ ನಟಿ

ಬೆಂಗಳೂರು : 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಕಿಚ್ಚ ಸುದೀಪ್ ಗೆ ಪೈಲ್ವಾನ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ನೀಡಿದ್ರೆ ತ್ರಯಂಬಕಂ ಚಿತ್ರಕ್ಕಾಗಿ ಅನುಪಮ ಗೌಡ ರವರಿಗೆ ನೀಡಲಾಗಿದೆ. ಪ್ರಶಸ್ತಿಯ ಸಂಪೂರ್ಣ ವಿವರ ಹೀಗಿದೆ. 

ಮೊದಲ ಅತ್ಯುತ್ತಮ ಚಿತ್ರ - ಮೋಹನದಾಸ 
ಎರಡನೇ ಅತ್ಯುತ್ತಮ ಚಿತ್ರ - ಲವ್ಮಾಕ್ಟೈಲ್ ಮೂರನೇ ಅತ್ಯುತ್ತಮ ಚಿತ್ರ - ಅರ್ಘ್ಯಂ 
ವಿಶೇಷ ಕಾಳಜಿ ಚಿತ್ತ - ಕನ್ನೇರಿ 
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ - ಇಂಡಿಯಾ v/s ಇಂಗ್ಲೆಂಡ್‌ 
ಅತ್ಯುತ್ತಮ ಮಕ್ಕಳ ಚಿತ್ರ - ಎಲ್ಲ ಆಡೋದು ನಾವು ಎಲ್ಲಿ ಆಡೋದು 
ಅತ್ಯುತ್ತಮ ನಟ - ಕಿಚ್ಚ ಸುದೀಪ್‌ ( ಪೈಲ್ವಾನ್) 
ಅತ್ಯುತ್ತಮ ನಟಿ - ಅನುಪಮಾ ಗೌಡ (ತ್ರಯಂಬಕಂ) 
ಅತ್ಯುತ್ತಮ ಪೋಷಕ ನಟ - ತಬಲ ನಾಣಿ - (ಕೆಮಿಸ್ಟ್ರಿ ಆಫ್‌ ಕರಿಯಪ್ಪ ) 
ಅತ್ಯುತ್ತಮ ಪೋಷಕ ನಟಿ - ಅನೂಷ ಕೃಷ್ಣ - (ಬ್ರಾಹ್ಮಿ) ಅತ್ಯುತ್ತಮ ಸಂಗೀತ ನಿರ್ದೇಶಕ - ವಿ. ಹರಿಕೃಷ್ಣ( ಯಜಮಾನ) 

ಅತ್ಯುತ್ತಮ ಹಿನ್ನೆಲೆ ಗಾಯಕ - ರಘು ದೀಕ್ಷಿತ್‌ (ಲವ್‌ ಮಾಕ್‌ ಟೈಲ್‌) 
ಅತ್ಯುತ್ತಮ ಹಿನ್ನೆಲೆ ಗಾಯಕಿ - ಡಾ. ಜಯದೇವಿ ಜಿಂಗಮ ಶೆಟ್ಟಿ - (ರಾಗಭೈರವಿ) 
ಅತ್ಯುತ್ತಮ ಸಂಭಾಷಣೆ - ಬರಗೂರು ರಾಮಚಂದ್ರಪ್ಪ(ಅಮೃತಮತಿ) 
ಅತ್ಯುತ್ತಮ ಬಾಲನಟ - ಮಾಸ್ಟರ್ ಪ್ರೀತಂ (ಮಿಂಚುಹುಳ) 
ಅತ್ಯುತ್ತಮ ಬಾಲನಟಿ - ಬೇಬಿ ವೈಷ್ಣವಿ ಆಡಿಗ ( ಸುಗಂಧಿ)