ಮುಂಬೈನಲ್ಲಿ ಆರಂಭವಾಗಲಿದೆ ಭಾರತದ ಮೊದಲ ಆ್ಯಪಲ್ ಸ್ಟೋರ್

ಮುಂಬೈನಲ್ಲಿ ಆರಂಭವಾಗಲಿದೆ ಭಾರತದ ಮೊದಲ ಆ್ಯಪಲ್ ಸ್ಟೋರ್

ಮುಂಬೈ: ಭಾರತದ ಮೊದಲ ಆ್ಯಪಲ್‌ ಸ್ಟೋರ್‌ ವಾಣಿಜ್ಯನಗರಿ ಮುಂಬೈನಲ್ಲಿ ಆರಂಭವಾಗಲಿದೆ. ಮಳಿಗೆ ಹೇಗಿರಲಿದೆ ಎಂಬ ಚಿತ್ರವನ್ನು ಬುಧವಾರ ಆ್ಯಪಲ್ ಬಿಡುಗಡೆ ಮಾಡಿದೆ. ಮುಂಬೈನ ಜಿಯೊ ವರ್ಲ್ಡ್‌ ಡ್ರೈವ್‌ ಮಾಲ್‌ನಲ್ಲಿ ‘ಆ್ಯಪಲ್‌ ಬಿಕೆಸಿ‘ ಎಂಬ ಹೆಸರಿನಲ್ಲಿ ಈ ಸ್ಟೋರ್‌ ಪ್ರಾರಂಭವಾಗಲಿದೆ. 

ಗ್ರಾಹಕರಿಗೆ ಅತ್ಯುನ್ನತ ಅನುಭವ ನೀಡುವ ಸಲುವಾಗಿ ಅತ್ಯಾಧುನಿಕವಾಗಿ ಮಳಿಗೆಯನ್ನು ಡಿಸೈನ್‌ ಮಾಡಲಾಗಿದ್ದು, ಪ್ರವೇಶ ದ್ವಾರದಲ್ಲಿ ‘ಹಲೋ ಮುಂಬೈ‘ ಎಂದು ಬರೆಯಲಾಗಿದೆ. ವಿಶೇಷ ಎಂದರೆ ಸ್ಟೋರ್‌ನ ವಿನ್ಯಾಸವು ಮುಂಬೈನ ಪ್ರಸಿದ್ಧ ‘ಕಪ್ಪು–ಹಳದಿ ಟಾಕ್ಸಿ‘ಯಿಂದ ಪ್ರೇರಣೆಗೊಂಡಿದೆ. ಇದೇ ತಿಂಗಳಲ್ಲಿ ಮಳಿಗೆ ಉದ್ಘಾಟನೆ ಆಗಲಿದೆ ಎಂದು ಆ್ಯಪಲ್ ತಿಳಿಸಿದೆ.