ಮತ್ತೊಂದು ಮಾಧ್ಯಮ ಸಂಸ್ಥೆಯನ್ನ ಖರೀದಿಸಿದ ಅದಾನಿ ಗ್ರೂಪ್‌ - IANS ಗೌತಮ್ ಅದಾನಿ ತೆಕ್ಕೆಗೆ!

ಮತ್ತೊಂದು ಮಾಧ್ಯಮ ಸಂಸ್ಥೆಯನ್ನ ಖರೀದಿಸಿದ ಅದಾನಿ ಗ್ರೂಪ್‌ - IANS ಗೌತಮ್ ಅದಾನಿ ತೆಕ್ಕೆಗೆ!

ನವದೆಹಲಿ: ಭಾರತದ ಎರಡನೇ ಅತಿದೊಡ್ಡ ಶ್ರೀಮಂತ ಹಾಗೂ ಏಷ್ಯಾದ ಟಾಪ್‌ 5 ಶ್ರೀಮಂತರಲ್ಲಿ ಒಬ್ಬರಾದ ಅದಾನಿ ಗ್ರೂಪ್‌ ಮಾಲೀಕ ಗೌತಮ್ ಅದಾನಿ ಅವರು ಮತ್ತೊಂದು ಮಾಧ್ಯಮ ಸಂಸ್ಥೆಯನ್ನು ಖರೀದಿಸಿದ್ದಾರೆ. 

ಅದಾನಿ ಗ್ರೂಪ್‌ ಸುದ್ದಿ ಸಂಸ್ಥೆಯಾದ ಐಎಎನ್‌ಎಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಬಹುಪಾಲು ಷೇರನ್ನು ಸ್ವಾಧೀನಪಡಿಸಿಕೊಂಡಿದೆ. ಆದರೆ ಖರೀದಿ ಮೊತ್ತವನ್ನು ಮಾತ್ರ ಕಂಪನಿ ಬಹಿರಂಗಪಡಿಸಿಲ್ಲ. 

ಅದಾನಿ ಎಂಟರ್ಪ್ರೈಸಸ್ ತನ್ನ ಅಂಗಸಂಸ್ಥೆ ಎಎಂಜಿ ಮೀಡಿಯಾ ನೆಟ್ವರ್ಕ್ಸ್ ಲಿಮಿಟೆಡ್ ಐಎಎನ್‌ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಈಕ್ವಿಟಿ ಷೇರುಗಳನ್ನು ಒಳಗೊಂಡ ಶೇಕಡಾ 50.50ರಷ್ಟು ಪಾಲನ್ನ ಸ್ವಾಧೀನಪಡಿಸಿಕೊಂಡಿದೆ ಎಂದು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. 

ಅದಾನಿ ಸಮೂಹವು ಮಾಧ್ಯಮ ಕ್ಷೇತ್ರದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದ್ದು, ಈಗಾಗಲೇ ಎನ್‌ಡಿಟಿವಿ, ಕ್ವಿಂಟಿಲಿಯನ್ ಬಿಸಿನೆಸ್ ಮೀಡಿಯಾವನ್ನು ಖರೀದಿಸಿದೆ. ಇದೀಗ ಅದಾನಿ ಎಂಟರ್‌ಪ್ರೈಸಸ್ ನಿಯಂತ್ರಕ ಫೈಲಿಂಗ್‌ನಲ್ಲಿ, ಐಎಎನ್‌ಎಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಶೇ. 50.50ಯಷ್ಟು ಷೇರುಗಳನ್ನು ತನ್ನ ಅಂಗಸಂಸ್ಥೆ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿರುವುದಾಗಿ ಹೇಳಿದೆ.