'ಕಿವೀಸ್' ಕಿವಿ ಹಿಂಡಿದ ಭಾರತ - ಟೀಮ್ ಇಂಡಿಯಾಗೆ ಭರ್ಜರಿ ಗೆಲುವು

ದುಬೈ: ಕಿವೀಸ್ ಪಡೆಯನ್ನು ಬಗ್ಗುಬಡಿದ ಟೀಮ್ ಇಂಡಿಯಾ 44 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಸಜ್ಜಾಗಿದೆ. 5 ವಿಕೆಟ್ ಕಬಳಿಸಿದ ವರುಣ್ ಚಕ್ರವರ್ತಿಯ ಸ್ಪಿನ್ ಮೋಡಿಯಿಂದ ಭಾರತಕ್ಕೆ ಗೆಲುವು ಸುಲಭ ಸಾಧ್ಯವಾಗಿದೆ. ಭಾರತ ವಿರುದ್ಧದ ಅಂತಿಮ ಗ್ರೂಪ್ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ 250 ರನ್‌ಗಳ ಗುರಿಯನ್ನು ಬೆನ್ನಟ್ಟಿದಾಗ ಕೇನ್ ವಿಲಿಯಮ್ಸನ್ 81 ರನ್‌ಗಳಿಗೆ ಕುಸಿದರು.
ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಮ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮ್ಯಾಟ್ ಹೆನ್ರಿ ಐದು ವಿಕೆಟ್ ಪಡೆದರೆ, ನ್ಯೂಜಿಲೆಂಡ್ ತಮ್ಮ ಫೀಲ್ಡಿಂಗ್‌ನಿಂದ ಪ್ರಭಾವಿತರಾದರು.
ಭಾರತದ ಪರ ಶ್ರೇಯಸ್ 98 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 79 ರನ್ ಗಳಿಸಿದರು. ಅವರಲ್ಲದೆ, ಹಾರ್ದಿಕ್ ಪಾಂಡ್ಯ 45 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 45 ರನ್ಗಳ ಕಾಣಿಕೆ ನೀಡಿದರು. ಆಲ್ರೌಂಡರ್ ಅಕ್ಷರ್ ಪಟೇಲ್ ಕೂಡ 61 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 42 ರನ್ ಬಾರಿಸಿದರೆ, ಕೆಎಲ್ ರಾಹುಲ್ 23 ರನ್, ರವೀಂದ್ರ ಜಡೇಜಾ 16 ರನ್, ನಾಯಕ ರೋಹಿತ್ ಶರ್ಮಾ 15 ರನ್ಗಳ ಇನ್ನಿಂಗ್ಸ್ ಆಡಿದರು. 300 ನೇ ಏಕದಿನ ಪಂದ್ಯವನ್ನು ಆಡುತ್ತಿದ್ದ ವಿರಾಟ್ ಕೊಹ್ಲಿ 11 ರನ್ ಗಳಿಸಿದರೆ, ಮೊಹಮ್ಮದ್ ಶಮಿ 5 ರನ್, ಶುಭ್ಮನ್ ಗಿಲ್ ಎರಡು ರನ್ ಗಳಿಸಲಷ್ಟೇ ಶಕ್ತರಾದರು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಎಂಟು ಓವರ್‌ಗಳಲ್ಲಿ 42 ರನ್ ನೀಡಿ ಐದು ವಿಕೆಟ್‌ಗಳನ್ನು ಪಡೆದರೆ, ಕೈಲ್ ಜೇಮಿಸನ್, ವಿಲಿಯಂ ಒ’ರೂರ್ಕ್, ಮಿಚೆಲ್ ಸ್ಯಾಂಟ್ನರ್ ಮತ್ತು ರಾಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.