ವಾಲಿನಾಥ್ ಮಹಾದೇವ್ ದೇವಾಲಯ ಉದ್ಘಾಟನೆ : ಪ್ರಧಾನಿ ಮೋದಿ ಭಾಗಿ

ವಾಲಿನಾಥ್ ಮಹಾದೇವ್ ದೇವಾಲಯ ಉದ್ಘಾಟನೆ : ಪ್ರಧಾನಿ ಮೋದಿ ಭಾಗಿ

ನವದೆಹಲಿ : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಅಯೋಧ್ಯೆ ರಾಮ ಮಂದಿರದ ಭವ್ಯ ಉದ್ಘಾಟನೆಯ ಒಂದು ತಿಂಗಳ ನಂತರ ಅಂದ್ರೆ ನಾಳೆ ಫೆಬ್ರವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಿಸ್ನಗರ್ ತಾಲ್ಲೂಕಿನ ವಾಲಿನಾಥ್ ಮಹಾದೇವ್ ದೇವಾಲಯದ ಉದ್ಘಾಟನೆ ಮಾಡಲಿದ್ದಾರೆ. 

ಹೌದು ಪ್ರಧಾನಿಗಳಿಂದ ಉದ್ಘಾಟನೆಯಾಗುತ್ತಿರುವುದರಿಂದ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಅತಿರುದ್ರ ಮಹಾಯಾಗಕ್ಕಾಗಿ ವಿಶಾಲವಾದ ಯಜ್ಞಶಾಲೆಯನ್ನು ಸಿದ್ದಪಡಿಸಲಾಗಿದೆ. 

ಫೆಬ್ರವರಿ 16 ರಂದು ದೇವಾಲಯದ ಆವರಣದಲ್ಲಿ ಪ್ರಾರಂಭವಾದ ಪ್ರತಿಷ್ಠಾಪನಾ ಸಮಾರಂಭವು ಫೆಬ್ರವರಿ 22 ರವರೆಗೆ ಮುಂದುವರಿಯುತ್ತದೆ. ಕಾರ್ಯಕ್ರಮದ ಕೊನೆಯ ದಿನವಾದ ನಾಳೆಯ ಪೂಜಾ ಆಚರಣೆಯಲ್ಲಿ ಪ್ರಧಾನ ಮಂತ್ರಿ ತಮ್ಮ ಉಪಸ್ಥಿತರಿರಲಿದ್ದಾರೆ. ಇದಲ್ಲದೆ, ‘ಮಹಾಯಜ್ಞ’ದಲ್ಲಿ 15,000 ಅತಿಥಿಗಳು ಭಾಗವಹಿಸಲಿದ್ದಾರೆ. 

ಹೊಸದಾಗಿ ನಿರ್ಮಿಸಲಾದ ದೇವಾಲಯವು 900 ವರ್ಷಗಳಷ್ಟು ಹಳೆಯದಾದ ದೇವಾಲಯದ ಪುನರ್ನಿರ್ಮಾಣವಾಗಿದೆ.