ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬೆದರಿಕೆ ಕೇಸ್‌; ಮತ್ತೊಬ್ಬ ಆರೋಪಿ ಪೊಲೀಸ್ ವಶಕ್ಕೆ

ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬೆದರಿಕೆ ಕೇಸ್‌; ಮತ್ತೊಬ್ಬ ಆರೋಪಿ ಪೊಲೀಸ್ ವಶಕ್ಕೆ

ಬೆಂಗಳೂರು: ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಬೆದರಿಕೆ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಮಿಳುನಾಡಿನಲ್ಲಿ ಅರೆಸ್ಟ್ ಆಗಿದ್ದ ಜಮಾಲ್ ಮಹಮ್ಮದ್ ಉಸ್ಮಾನಿಯನ್ನ ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಮಿಳುನಾಡು ತೌಹೀದ್ ಜಮಾತ್‌ನ ಸದಸ್ಯರಾಗಿದ್ದ ರಹಮತ್ ಉಲ್ಲಾನನ್ನು ಇತ್ತೀಚೆಗೆ ತಂಜಾವೂರು ಪೊಲೀಸರು ಬಂಧಿಸಿದ್ದರು. ನಂತರ ಆತನನ್ನ ಬೆಂಗಳೂರು ಪೊಲೀಸ್ರು ವಶಕ್ಕೆ ಪಡೆದಿದ್ದರು. ಇದೀಗ ಮತ್ತೋರ್ವ ಆರೋಪಿ ಜಮಾಲ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತಮಿಳುನಾಡು ಮೂಲದ ಆರೋಪಿ ರಹಮತ್ ಉಲ್ಲಾನನ್ನು ರಾಜ್ಯ ಆಂತರಿಕಾ ಭದ್ರತಾ ಇಲಾಖೆ ಇಲಾಖೆ ಸಹ ವಿಚಾರಣೆ‌ ನಡೆಸುತ್ತಿದೆ.‌ ಆರೋಪಿಯಿಂದ ಮೊಬೈಲ್ ಹಾಗೂ ಡಿಜಿಟಲ್ ಎವಿಡೆನ್ಸ್ ಮಾಹಿತಿ ಸಂಗ್ರಹಿಸಿರುವ ವಿಧಾನಸೌಧ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಲು ಆರೋಪಿಯನ್ನು ಐಎಸ್ ಡಿ ವಶಕ್ಕೆ ನೀಡಿದ್ದಾರೆ. ಆರೋಪಿ ದುಷ್ಕೃತ್ಯ ಹಿಂದೆ ಯಾರೆಲ್ಲ ಇದ್ದಾರೆ ? ಯಾವೆಲ್ಲಾ ಅಂಶಗಳು ಕಾರಣವಾಗಿರಬಹುದು ಎಂಬುದರ ಐಎಸ್ ಡಿ ತನಿಖೆ ನಡೆಸುತ್ತಿದೆ.