ಹೆಲ್ಮೆಟ್ ಸಡಿಲವಾಗಿ ಧರಿಸಿದ್ದರೂ ಬೀಳುತ್ತೆ ದಂಡ

ಹೆಲ್ಮೆಟ್ ಸಡಿಲವಾಗಿ ಧರಿಸಿದ್ದರೂ ಬೀಳುತ್ತೆ ದಂಡ

ಹೊಸದಿಲ್ಲಿ: ಹೆಲ್ಮೆಟ್ ಧರಿಸುವುದಷ್ಟೇ ಮುಖ್ಯ ಅಲ್ಲ. ಇನ್ಮುಂದೆ ಹೆಲ್ಮೆಟ್‌ಅನ್ನು ಸಡಿಲವಾಗಿ ಧರಿಸಿದ್ದರೆ ಅದಕ್ಕೂ ಬೀಳುತ್ತೆ ದಂಡ! ಕೇಂದ್ರ ಸರ್ಕಾರ ಈ ರೀತಿಯ ಮತ್ತೊಂದು ಸಂಚಾರಿ ನಿಯಮವನ್ನು ಜಾರಿ ಮಾಡಿದೆ. ಸಡಿಲವಾಗಿ ಹೆಲ್ಮೆಟ್ ಧರಿಸಿದರೆ 2 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾಎ ಹೇಳಿದೆ. 

 

ಹೆಲ್ಮೆಟ್‌ ಸರಿಯಾಗಿ ಧರಿಸದೇ ಇದ್ದರೆ ಯಾವುದೇ ಸುರಕ್ಷತೆ ಸಿಗುವುದಿಲ್ಲ. ಹಾಗಾಗಿ ಜನರು ಹೆಲ್ಮೆಟ್‌ ಧರಿಸುವುದನ್ನು ಕ‌ಡ್ಡಾಯಗೊಳಿ­ಸುವುದಕ್ಕೋಸ್ಕರ ಕೇಂದ್ರ ಮೋಟಾರು ನಿಯಮ­ಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.