ಧಾರವಾಡ : ಪರಿಸರಸ್ನೆಹಿ ಗಣೇಶ ಚತುರ್ಥಿ ಆಚರಣೆ ಕುರಿತು ಜಿಲ್ಲಾಧಿಕಾರಿ ಸಭೆ

ಧಾರವಾಡ : ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅಧ್ಯಕ್ಷತೆಯಲ್ಲಿ ಪರಿಸರಸ್ನೆಹಿ ಗಣೇಶ ಚತುರ್ಥಿ ಆಚರಣೆ ಕುರಿತು ಅವಳಿನಗರದ ಸಾರ್ವಜನಿಕ ಗಣೇಶ ಮಹಾಮಂಡಳಗಳು, ಗಣೇಶ ವಿಗ್ರಹ ತಯಾರಕರು, ಪಟಾಕಿ ಮಾರಾಟಗಾರರು ಮತ್ತು ಯುವಕ ಮಂಡಳಗಳ ಸದಸ್ಯರ ಸಭೆ ಜರುಗಿತು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಎಎಸ್ ಪಿ ನಾರಾಯಣ ಭರಮನಿ, ಎಸಿಪಿ ಪ್ರಶಾಂತ ಸಿದ್ದನಗೌಡರ, ಸಾರ್ವಜನಿಕ ಗಣೇಶ ಮಹಾಮಂಡಳಗಳ ಉಪಾಧ್ಯಕ್ಷರಾದ ಅಲ್ತಾಫ ಕಿತ್ತೂರ, ವಸಂತ ಅರ್ಕಾಚಾರಿ ಸೇರಿದಂತೆ ಇತರರು ಇದ್ದರು.