ಹುಬ್ಬಳ್ಳಿ: ಏಪ್ರಿಲ್ 1ರಿಂದ 30ರವರೆಗೆ ಆಸ್ತಿ ತೆರಿಗೆ ಪಾವತಿಗೆ ಅವಕಾಶ-5%ರಷ್ಟು ರಿಯಾಯಿತಿ

ಹುಬ್ಬಳ್ಳಿ: ಏಪ್ರಿಲ್ 1ರಿಂದ 30ರವರೆಗೆ ಆಸ್ತಿ ತೆರಿಗೆ ಪಾವತಿಗೆ ಅವಕಾಶ-5%ರಷ್ಟು ರಿಯಾಯಿತಿ

ಹುಬ್ಬಳ್ಳಿ: ಪ್ರಸಕ್ತ ಆರ್ಥಿಕ ವರ್ಷ 2024-25 ನೇ ಸಾಲಿನ ಆಸ್ತಿ ತೆರಿಗೆಯನ್ನು ಸಂದಾಯಿಸಲು ಪ್ರತಿಶತ 5 ರಷ್ಟು ರಿಯಾಯಿತಿಯೊಂದಿಗೆ ಏಪ್ರಿಲ್ 1 ರಿಂದ 30 ರವರೆಗೆ ಅವಕಾಶ ಕಲ್ಪಿಸಲಾಗಿದೆ. 

ಎಲ್ಲಾ ವಲಯ ಕಚೇರಿಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಆಸ್ತಿ ತೆರಿಗೆ ಚಲನ್‌ಗಳನ್ನು ವಿತರಿಸಲಾಗುತ್ತಿದೆ. ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ತಮ್ಮ ಮೋಬೈಲ್‌ನಲ್ಲಿ ಎಚ್.ಡಿ.ಎಂ.ಸಿ. ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಆ್ಯಪ್‌ನಲ್ಲೂ ಆಸ್ತಿ ತೆರಿಗೆಯನ್ನು ಭರಿಸಬಹುದಾಗಿದೆ. 

ಸಾರ್ವಜನಿಕರು ಆಸ್ತಿ ತೆರಿಗೆಯನ್ನು 2024-25 ನೇ ಸಾಲಿನಲ್ಲಿ ಕೇವಲ ಹುಬ್ಬಳ್ಳಿ ಧಾರವಾಡ-1 (ಕರ್ನಾಟಕ ಒನ್ ) ಸೇವಾ ಕೇಂದ್ರಗಳ ಮುಖಾಂತರ ಅಥವಾ ಪರ್ಯಾಯ ವ್ಯವಸ್ಥೆಯಾಗಿ ಸಂದಾಯ ಮಾಡಲು http://www.hdmc.in ವೆಬ್ ಸೈಟ್‌ನಲ್ಲಿ ಎಲ್ಲ ವಿಧದ ಆನ್‌ಲೈನ್ ಪಾವತಿ ವ್ಯವಸ್ಥೆಗಳ ಮುಖಾಂತರ ಆಸ್ತಿಕರ ಸಂದಾಯ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. 

ಹಿಂದಿನ ವರ್ಷದ ಆಸ್ತಿ ತೆರಿಗೆ ಬಾಕಿ ಪಾವತಿಸದಿದ್ದವರೂ ಸಹ ತಮ್ಮ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸಿ ಪಾಲಿಕೆ ಕೈಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳಲ್ಲಿ ಜವಾಬ್ದಾರಿಯುತ ಪಾಲುದಾರರಾಗುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಈಶ್ವರ ಉಳ್ಳಾಗಡ್ಡಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.