ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಗೌರವ್ ವಲ್ಲಭ್

ನವದೆಹಲಿ: ಕಾಂಗ್ರೆಸ್ ನಾಯಕ ಗೌರವ್ ವಲ್ಲಭ್ ಪಕ್ಷದಲ್ಲಿ ತಮಗಿದ್ದ ಎಲ್ಲ ಹುದ್ದೆಗಳನ್ನು ತೊರೆದು ಅಧಿಕೃತಾಗಿ ಬಿಜೆಪಿ ಸೇರಿದ್ದಾರೆ.
ಗೌರವ್ ವಲ್ಲಭ್ ಅವರು ಸನಾತನ ವಿರೋಧಿ ಘೋಷಣೆಗಳನ್ನು ಕೂಗಲು ಸಾಧ್ಯವಿಲ್ಲ ಎಂದು ಹೇಳಿ ಕಾಂಗ್ರೆಸ್ನ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿದ ರಾಜೀನಾಮೆ ಪತ್ರವನ್ನು ವಲ್ಲಭ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪಕ್ಷವು ದಿಕ್ಕುದೆಸೆಯಿಲ್ಲದೆ ಚಲಿಸುತ್ತಿದೆ. ನಾನು ಬೆಳಿಗ್ಗೆ ಮತ್ತು ಸಂಜೆ ಸನಾತನ ವಿರೋಧಿ ಘೋಷಣೆಗಳನ್ನು ಕೂಗಲು ಅಥವಾ ಸಂಪತ್ತಿನ ಸೃಷ್ಟಿಕರ್ತರನ್ನು ನಿಂದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.