ಹುಬ್ಬಳ್ಳಿ: ನಮ್ಮವರೇ ಸಿಎಂ ಇದ್ದರೂ ಇನ್ನೂ ಆಯ್ಕೆ ಆಗಿಲ್ಲ ಮೇಯರ್, ಉಪಮೇಯರ್

ಹುಬ್ಬಳ್ಳಿ: ನಮ್ಮವರೇ ಸಿಎಂ ಇದ್ದರೂ ಇನ್ನೂ ಆಯ್ಕೆ ಆಗಿಲ್ಲ ಮೇಯರ್, ಉಪಮೇಯರ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆಯಾಗಿ ಫಲಿತಾಂಶ ಹೊರಬಿದ್ದು, ತಿಂಗಳು ಕಳೆದರೂ ಮೇಯರ್, ಉಪಮೇಯರ್ ಆಯ್ಕೆ ಆಗಿಲ್ಲ. ಹುಬ್ಬಳ್ಳಿಯವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರೂ ಈ ವಿಳಂಬ ಯಾಕೆ ಎಂಬುದು ಜನತೆಯ ಪ್ರಶ್ನೆಯಾಗಿದೆ. ಈಗಲೂ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂಬುದು ಪಾಲಿಕೆಗೆ ಚುನಾಯಿತರಾಗಿರುವರ ಅಳಲಾಗಿದ್ದು, ಬಿಜೆಪಿ ನಾಯಕರು ಮುಸುಕಿನ ಗುದ್ದಾಟವೇ ಇದಕ್ಕೆಲ್ಲ ಕಾರಣವೇ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ನಗರಾಭಿವೃದ್ಧಿ ಇಲಾಖೆಯು ಕರ್ನಾಟಕ ರಾಜ್ಯಪತ್ರದಲ್ಲಿ (ಗೆಜೆಟೆಡ್) ಪ್ರಕಟಿಸಿದೆ. ಆಯ್ಕೆಯಾಗಿರುವ ಅಭ್ಯರ್ಥಿಗಳ ಹೆಸರು ಮತ್ತು ವಿಳಾಸವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಇದರಿಂದ ಆಯ್ಕೆಯನ್ನು ರಾಜ್ಯ ಸರ್ಕಾರ ಅಧಿಕೃತ ಗೊಳಿಸಿದಂತಾಗಿದೆ. ಮೇಯರ್‌-ಉಪ ಮೇಯರ್‌ ಆಯ್ಕೆ ಚುನಾವಣೆಗೂ ಮೊದಲು ಪಾಲಿಕೆಗೆ ಚುನಾಯಿತರಾದವರು ಹೆಸರು ಗೆಜೆಟ್ ನಲ್ಲಿ ಪ್ರಕಟವಾಗಲೇಬೇಕು. ಹುಬ್ಬಳ್ಳಿಯವರೇ ಆದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರೂ ಈ ವಿಳಂಬ ಯಾಕೆ ಎಂಬುದು ಪ್ರಶ್ನೆಯಾಗಿದ್ದು, ಈಗಲೂ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಆರೋಪವಿದೆ. ಅಲ್ಲದೆ ಚುನಾಯಿತ ಪ್ರತಿನಿಧಿಗಳಲ್ಲಿದೆ. ನಗರದ ಬಹುತೇಕ ಸ್ಮಾರ್ಟ್ ಸಿಟಿ,ಎಆರ್ ಎಫ್ ಯೋಜನೆಯಡಿ ರಸ್ತೆ ಕಾಮಗಾರಿ ಅರ್ಧಕ್ಕೆ‌ ನಿಂತಿವೆ. ಈ ಬಗ್ಗೆ ಜಗದೀಶ್ ಶೆಟ್ಟರ್ ಅವರನ್ನ ಕೇಳಿದರೆ ಹೇಳೋದು ಹೀಗೆ.. ಚುನಾಯಿತ ಪ್ರತಿನಿಧಿಗಳ ಆಡಳಿತವಿಲ್ಲದ 31 ತಿಂಗಳುಗಳ ಅವಧಿಯು ಹು-ಧಾ ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ದೀರ್ಘವಾದದ್ದು. ಹೀಗಾಗಿ ಸಾಕಷ್ಟು ಕೆಲಸಗಳು ಆಗಬೇಕಿದೆ. ಇವೆಲ್ಲ ಆಗಬೇಕಾದರೆ ಮೇಯರ್ ಉಪಮೇಯರ್ ಆಯ್ಕೆ ಶೀಘ್ರವಾಗಿ ಆಗಬೇಕು ಅನ್ನೋದು ಸಾರ್ವಜನಿಕರ ವಾದ.