ಪ್ರಮುಖ ರಾಜಕೀಯ ಬೆಳವಣಿಗೆ : ಕೈಲಾಶ್ ರಾಜೀನಾಮೆ ಬೆನ್ನಲ್ಲೇ ಎಎಪಿ ಸೇರಿದ BJP ಮಾಜಿ ಶಾಸಕ

ಪ್ರಮುಖ ರಾಜಕೀಯ ಬೆಳವಣಿಗೆ : ಕೈಲಾಶ್ ರಾಜೀನಾಮೆ ಬೆನ್ನಲ್ಲೇ ಎಎಪಿ ಸೇರಿದ BJP ಮಾಜಿ ಶಾಸಕ

ನವದೆಹಲಿ: ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಆಮ್ ಆದ್ಮಿ ಪಕ್ಷದ ಸಚಿವ ಕೈಲಾಶ್ ಗೆಹಲೋತ್‌ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಬಿಜೆಪಿ ಮಾಜಿ ಶಾಸಕ ಅನಿಲ್ ಝಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. 

ಝಾ ಅವರು ವಾಯವ್ಯ ದೆಹಲಿಯ ಕಿರಾರಿ ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಭಾನುವಾರ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಎಎಪಿಗೆ ಸೇರ್ಪಡೆಗೊಂಡರು. 

ಬಳಿಕ ಮಾತನಾಡಿದ ಅವರು, ಕೇಜ್ರಿವಾಲ್ ಅವರ ವ್ಯಕ್ತಿತ್ವ ಮತ್ತು ನಗರದ ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವ ಪೂರ್ವಾಂಚಲಿ ಸಮುದಾಯದ ಜನರ ಜೀವನವನ್ನು ಸುಧಾರಿಸಲು ಎಎಪಿ ಸರ್ಕಾರ ಮಾಡಿದ ಕೆಲಸದಿಂದ ಪ್ರಭಾವಿತನಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ಹೇಳಿದ್ದಾರೆ. 

ಸಾರಿಗೆ ಮತ್ತು ಪರಿಸರ ಸಚಿವ ಕೈಲಾಶ್ ಗೆಹಲೋತ್‌ ಅವರು ಪಕ್ಷವನ್ನು ತೊರೆದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.