ಕರ್ನಾಟಕದ ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ರಾಧಾಮೋಹನ್ ದಾಸ್ ಅಗರ್ ವಾಲ್, ಸುಧಾಕರರೆಡ್ಡಿ ನೇಮಕ
ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಬಿಜೆಪಿ ಕರ್ನಾಟಕವೂ ಸೇರಿದಂತೆ 23 ರಾಜ್ಯಗಳ ಬಿಜೆಪಿ ರಾಜ್ಯ ಉಸ್ತುವಾರಿಗಳನ್ನು ಬದಲಾಯಿಸಿ ನೇಮಕಾತಿ ಪ್ರಕಟಿಸಿದೆ.
ರಾಧಾಮೋಹನ್ ದಾಸ್ ಅಗರ್ ವಾಲ್ ಮತ್ತು ಸುಧಾಕರ್ ರೆಡ್ಡಿ ಅವರು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದಾರೆ. ಈ ಮೊದಲು ಅರುಣ್ ಸಿಂಗ್ ಬಿಜೆಪಿ ರಾಜ್ಯ ಉಸ್ತುವಾರಿಯಾಗಿದ್ದರು.