ಟ್ರಂಪ್ ನಿವಾಸದ ಮೇಲೆ ಎಫ್‌ಬಿಐ ದಾಳಿ: ರಿಪಬ್ಲಿಕನ್ ಪಕ್ಷ ಖಂಡನೆ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫ್ಲೋರಿಡಾದ ನಿವಾಸ ಮಾರಾಲಾಗೋ ಎಸ್ಟೇಟ್ ಮೇಲೆ ಫೆಡರಲ್ ತನಿಖಾ ದಳವು ದಾಲೀ ನಡೆಸಿತ್ತು. ಈ ದಾಳಿಯನ್ನು ರಿಪಬ್ಲಿಕನ್ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಅಧ್ಯಕ್ಷ ಸ್ಥಾನದಿಂದ ಟ್ರಂಪ್ ಅವರು ನಿರ್ಗಮಿಸಿದ ಬಳಿಕ ತನ್ನೊಂದಿಗೆ ತನ್ನೊಂದಿಗೆ ಕೆಲವು ದಾಖಲೆಗಳನ್ನು ಒಯ್ದಿದ್ದರು. ಈ ದಾಖಲೆಗಳನ್ನು ಟ್ರಂಪ್ ಅವರು ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ. ಈ ತನಿಖೆಯ ಭಾಗವಾಗಿ ಫೆಡರಲ್ ತನಿಖಾ ದಳದ ಅಧಿಕಾರಿಗಳು ಟ್ರಂಪ್ ನಿವಾಸದ ಮೇಲೆ ದಾಳಿ ನಡೆಸಿದ್ದರು.
ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಟ್ರಂಪ್ ಚಿಂತನೆ ನಡೆಸುತ್ತಿರುವ ಸಂದರ್ಭದಲ್ಲಿಯೇ ಈ ದಾಳಿಗಳು ನಡೆದಿರುವುದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. 2024ರಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ತನ್ನ ಅಭ್ಯರ್ಥನವನ್ನು ಕೂಡಲೇ ದೃಢಪಡಿಸುವಂತೆ ಅವರ ಬೆಂಬಲಿಗರು 76 ವರ್ಷ ವಯಸ್ಸಿನ ಟ್ರಂಪ್ ಅವರನ್ನು ಆಗ್ರಹಿಸಿದ್ದಾರೆ. ಫ್ಲಾರಿಡಾದ ವೆಸ್ಟ್ ಪಾಮ್ ಬೀಚ್ನಲ್ಲಿರುವ ತನ್ನ ಮಾರ್ಲಾಗೊ ರಿಸಾರ್ಟ್ ಮೇಲೆ ನಡೆದ ಎಫ್ಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ‘‘ಅಮೆರಿಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರ ಇತರ ಯಾರಿಗೂ ಕೂಡಾ ಹಿಂದೆಂದೂ ಇಂತಹದ್ದು ನಡೆದಿರಲಿಲ್ಲ’’ ಎಂದರು.