ಹುಬ್ಬಳ್ಳಿ: ಎಸ್ ಡಿಎಂ ಎಫೆಕ್ಟ್ ... ಕಿಮ್ಸ್ ಹೈ ಅಲರ್ಟ್ : ಎರಡೂ ಡೋಸ್ ಪಡೆದರೆ ಮಾತ್ರ ಎಂಟ್ರಿ

ಹುಬ್ಬಳ್ಳಿ: ಧಾರವಾಡದ ಎಸ್.ಡಿ.ಎಂ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಸ್ಪೋಟದ ಬೆನ್ನಲ್ಲೆ ವಾಣಿಜ್ಯನಗರಿ ಹುಬ್ಬಳ್ಳಿ ಕಿಮ್ಸ್ ಅಲರ್ಟ್ ಆಗಿದೆ. ಎಸ್.ಡಿ.ಎಂ ಮೆಡಿಕಲ್ ಕಾಲೇಜಿನ ಎರಡು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಬೆನ್ನಲ್ಲೇ ಎರಡೂ ಡೋಸ್ ಲಸಿಕೆ ಪಡೆದೆವರಿಗಷ್ಟೆ ಕಿಮ್ಸ್ ಗೆ ಎಂಟ್ರಿ ಕೊಡಲಾಗಿದೆ. ಎರಡೂ ಡೋಸ್ ಪಡೆದ ರೋಗಿಗಳು ಮತ್ತು ಸಂಬಂಧಿಕರಿಗೆ ಮಾತ್ರ ಪ್ರವೇಶ ಕಲ್ಪಿಸಿ ಕಿಮ್ಸ್ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಲಸಿಕೆ ಪಡೆದಿದ್ದಾರೋ ಇಲ್ಲವೋ ಎಂದು ಪರೀಶಿಲಿಸಲು ಐದು ತಂಡಗಳ ನಿಯೋಜನೆ ಮಾಡಲಾಗಿದ್ದು, ಆಸ್ಪತ್ರೆಗೆ ಬರುವವರು ಕಡ್ಡಾಯಾವಾಗಿ ಲಸಿಕೆ ಪಡೆದ ದಾಖಲೆ ತರಬೇಕು. ಇಲ್ಲದಿದ್ದರೇ ತುರ್ತು ಚಿಕಿತ್ಸೆ ಹೊರತುಪಡಿಸಿ ಆಸ್ಪತ್ರೆಗೆ ನೋ ಎಂಟ್ರಿ ಎಂದು ಆದೇಶ ಹೊರಡಿಸಿದೆ. ಹೊರ ರೋಗಿಗಳ ವಿಭಾಗ,ತುರ್ತು ಚಿಕಿತ್ಸಾ ವಿಭಾಗ, ಮಕ್ಕಳ ವಾರ್ಡ್, ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಬಳಿಯಲ್ಲಿ ಐದು ತಂಡಗಳು ಪರೀಶಿಲನೆ ನಡೆಸಲಿವೆ.