ಬ್ರೇಕಿಂಗ್ : ಮುಷ್ಕರ ವಾಪಸ್ ಪಡೆದ ನೌಕರರು

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದಲ್ಲಿ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರ ಅಂತ್ಯವಾಗಿದೆ. ಸರ್ಕಾರ 17% ವೇತನ ಹೆಚ್ಚಳ ಮಾಡುವ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರ ಸಂಘ ಮುಷ್ಕರ ಕೈ ಬಿಡುವ ನಿರ್ಧಾರ ತೆಗೆದುಕೊಂಡಿದೆ.
ರಾಜ್ಯ ಸರ್ಕಾರ ಕೇವಲ ಒಂದು ದಿನದಲ್ಲಿ ಈ ನಿರ್ಧಾರ ಮಾಡಿರುವುದರಿಂದ ತಕ್ಷಣದಿಂದಲೇ ನೌಕರರು ಕೆಲಸಕ್ಕೆ ಹಾಜರಾಗುವಂತೆ ಸಂಘದ ಅಧ್ಯಕ್ಷ ಸಿಎಸ್. ಷಡಕ್ಷರಿ ಸೂಚನೆ ನೀಡಿದ್ದಾರೆ.