78,000 ಗಡಿ ದಾಟಿದ ಸೆನ್ಸೆಕ್ಸ್ - ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ ನಿಫ್ಟಿ

ನವದೆಹಲಿ: ಜೂನ್ 25ರಂದು ಷೇರು ಮಾರುಕಟ್ಟೆಯಲ್ಲಿ ಪಾಸಿಟಿವ್ ಟ್ರೆಂಡ್‌ನಿಂದ ಏರಿಕೆಯಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೇರಿದಂತೆ ಎಲ್ಲಾ ಪ್ರಮುಖ ಸೂಚ್ಯಂಕಗಳು ಜೀವಿತಾವಧಿಯ ಎಲ್ಲ ದಾಖಲೆಗಳನ್ನು ಹಿಂದಿಕ್ಕಿವೆ.
ಸೆನ್ಸೆಕ್ಸ್ ಮೊದಲ ಬಾರಿಗೆ 78,000 ಗಡಿ ದಾಟಿದೆ. ನಿಫ್ಟಿ ಸಹ ಜೀವಿತಾವಧಿ ಸಾಧನೆಯನ್ನು ಮುಟ್ಟಿತು. 30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 78,053.52ಕ್ಕೆ ಕೊನೆಗೊಂಡಿತು. ಇದು 712.44 ಪಾಯಿಂಟ್‌ಗಳು ಅಥವಾ 0.92 ರಷ್ಟು ಲಾಭವನ್ನು ಸೂಚಿಸುತ್ತದೆ. ಅಂತೆಯೇ, ಎನ್‌ಎಸ್‌ಇ ನಿಫ್ಟಿ 184.85 ಪಾಯಿಂಟ್‌ಗಳಿಂದ ಅಥವಾ ಶೇಕಡಾ 0.79 ರಷ್ಟು ಏರಿಕೆಯಾಗಿ 23,722.70ಕ್ಕೆ ಕೊನೆಗೊಂಡಿತು.