ಮೈಸೂರು ದಸರಾ ಉತ್ಸವದಲ್ಲಿ ಧಾರವಾಡದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ

ಮೈಸೂರು ದಸರಾ ಉತ್ಸವದಲ್ಲಿ ಧಾರವಾಡದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ

ಧಾರವಾಡ: ಪ್ರಸಕ್ತ ಸಾಲಿನ ಮೈಸೂರು ದಸರಾ ಮಹೋತ್ಸದಲ್ಲಿ ಭಾಗವಹಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ ಸ್ತಬ್ಧಚಿತ್ರಕ್ಕೆ ರಾಜ್ಯಮಟ್ಟದ ದ್ವಿತೀಯ ಪ್ರಶಸ್ತಿ ಲಭಿಸಿದ್ದು, ಈ ದಸರಾ ಮಹೋತ್ಸವದ ಸ್ತಬ್ದಚಿತ್ರ ಉಪ ಸಮಿತಿ ಇಂದು ಫಲಿತಾಂಶ ಪ್ರಕಟಿಸಿದೆ. 

ಇಸ್ರೊ ಗಗನಯಾನದಲ್ಲಿ ಹಣ್ಣಿನ ನೋಣಗಳ ಕುರಿತು ಧಾರವಾಡ ಜಿಲ್ಲಾ ಪಂಚಾಯತಿಯಿಂದ ಸ್ತಬ್ದ ಚಿತ್ರ ರೂಪಿಸಲಾಗಿತ್ತು. ಅತ್ಯತ್ತಮ ಸ್ತಬ್ದಚಿತ್ರ ಆಯ್ಕೆಗಾಗಿನ ತಜ್ಞರ ಸಮಿತಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲ ಜಿಲ್ಲೆಗಳ ಸ್ತಬ್ಧಚಿತ್ರಗಳನ್ನು ಪರಿಶೀಲಿಸಿ, ವಿನೂತನವಾದ ಮತ್ತು ಹೊಸ ವೈಜ್ಞಾನಿಕ ಸಂದೇಶ ಹೊಂದಿದ್ದ ಧಾರವಾಡ ಜಿಲ್ಲೆಯ ಸ್ತಬ್ಧಚಿತ್ರವನ್ನು ದ್ವಿತೀಯ ಪ್ರಶಸ್ತಿಗೆ ಆಯ್ಕೆ ಮಾಡಿದೆ. 

ಸ್ತಬ್ಧಚಿತ್ರ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಗೆ ಗೌರವ ತಂದಿರುವ ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ ಅವರು ಮತ್ತು ಅವರ ನೇತೃತ್ವದ ಅಧಿಕಾರಿಗಳ ತಂಡವನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹಾಗೂ ಇತರರು ಅಭಿನಂದಿಸಿದ್ದಾರೆ.