ಬೆಂಗಳೂರು: ಸಾಲು ಸಾಲು ರಜೆ, ವೀಕೆಂಡ್- KSRTCಯಿಂದ ಹೆಚ್ಚುವರಿ ಬಸ್

ಬೆಂಗಳೂರು: ಈ ವಾರಾಂತ್ಯದ ನಾಲ್ಕು ದಿನಗಳಲ್ಲಿ ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ರಾಜ್ಯದ ನಾನಾ ಭಾಗಗಳಿಗೆ 300 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ, ಕುಂದಾಪುರ, ಧರ್ಮಸ್ಥಳ ಸೇರಿದಂತೆ ಎಲ್ಲೆಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣಕ್ಕೆ ಬಸ್‌ಗಳು ಸಂಚಾರ ಹೆಚ್ಚಾಗಿ ಇರಲಿದೆ. ಶುಕ್ರವಾರ ಗುಡ್ ಫ್ರೈಡೆ ಹಾಗೂ ವೀಕೆಂಡ್‌ನಿಂದಾಗಿ ರಜೆಗಳು ಬಂದಿವೆ. ಹೀಗಾಗಿ ಕೆಎಸ್‌ಆರ್ ಟಿಸಿಯಿಂದ ಬೆಂಗಳೂರಿನಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.