ಭೀಕರ ಚಳಿಗೆ ರಾಷ್ಟ್ರ ರಾಜಧಾನಿ ಗಡಗಡ - 5 ದಿನಗಳ ಕಾಲ ನರ್ಸರಿಯಿಂದ 5 ತರಗತಿವರೆಗಿನ ಮಕ್ಕಳಿಗೆ ರಜೆ

ನವದೆಹಲಿ : ಭೀಕರ ಚಳಿಗೆ ರಾಷ್ಟ್ರ ರಾಜಧಾನಿ ಥರ ಥರ ನಡುಗುತ್ತಿದೆ. ದೆಹಲಿಯಲ್ಲಿ ಚಳಿ ಅತಿಯಾಗಿದೆ. ಈ ಹಿನ್ನೆಲೆಯಲ್ಲಿ 5 ದಿನಗಳ ಕಾಲ ನರ್ಸರಿಯಿಂದ 5 ತರಗತಿವರೆಗಿನ ಮಕ್ಕಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.
ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಪ್ರತಿ ದಿನ ಹೆಚ್ಚುತ್ತಿದ್ದು, ಈ ಹಿನ್ನೆಲೆ ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಖಾಸಗಿ ಮತ್ತು ಸರ್ಕಾರಿ ಶಾಲೆಗಳನ್ನು ಮುಚ್ಚಲು ನಿರ್ಧರಿಸಿವೆ. ಇದಕ್ಕಾಗಿ ಸ್ಥಳೀಯ ಸರ್ಕಾರ ಆದೇಶವನ್ನೂ ಹೊರಡಿಸಿದೆ. ಇನ್ನು ಹಲವು ಕಡೆಗಳ ಶಾಲೆಗಳಲ್ಲಿ ತರಗತಿಗಳ ಸಮಯವನ್ನು ಬದಲಾಯಿಸಲಾಗಿದೆ.