ನೇಹಾ ಹಿರೇಮಠ ಬರ್ಬರ ಹತ್ಯ ಖಂಡಿಸಿ ಅಂಜುಮನ್. ಶಿಕ್ಷಣ ಸಂಸ್ಥೆಗಳ ವಿಧ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ . ಮಹಾನಗರ ಹು.ಧಾ.ಮಹಾನಗರ ಪಾಲಿಕೆ ಸದಸ್ಯ ಶ್ರೀ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಅವಳ ಬರ್ಬರ ಹತ್ಯವನ್ನು ಖಂಡಿಸಿ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸಿ ಕೊಡುವಂತೆ ಆಗ್ರಹಿಸಿ ಹುಬ್ಬಳ್ಳಿ ಅಂಜುಮನ್ ಇಸ್ಲಾಂ ಸಂಸ್ಥೆಯ ಎಲ್ಲ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು,
ಪ್ರತಿಭಟನೆ ನೇತೃತ್ವದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎ.ಎಂ.ಹಿಂಡಸಗೇರಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ತಾಫಹುಸೇನ ಹಳ್ಳೂರ. ಬಾಷಾಸಾಬ್ ಅತ್ತಾರ, ರಫೀಕ ಬಂಕಾಪೂರ,ಇರ್ಶಾದ ಬಳ್ಳಾರಿ. ಮಹೆಮೂದ ಕೊಳೂರ, ಇಲಿಯಾಸ್ ಮನಿಯಾರ, ಬಶೀರ ಗುಡಮಾಲ್, ಸಲೀಂ ಸುಂಡಕೆ, ನವೀದ್ ಮುಲ್ಲಾ, ರಿಯಾಜ್ ಖತೀಬ್, ಶಮಶೇರ್ ನಾಯಕವಾಡಿ ಶ್ರೀ ಅಲಹಾಜ್ ಎಂ.ಎಂ.ಕಂಚಿಸಾಬ್ ಸೇರಿದಂತೆ ಅಂಜುಮನ್,ಜಮಾತಿನ ಮುತವಲ್ಲಿಗಳು,ಕಾಲೇಜಿನ ಎಲ್ಲಾ ಪ್ರೀಸ್ಸಿಪಾಲ್ ಮತ್ತು ಶಿಕ್ಷಕರು,ಸಿಬ್ಬಂದಿ ವರ್ಗದವರು ಹಾಜರಿದ್ದರು.