25 ವರ್ಷಗಳ ಬಳಿಕ ಐಸಿಸಿ ಏಕದಿನ ಪಂದ್ಯಾವಳಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್‌, ಭಾರತ ಮುಖಾಮುಖಿ

25 ವರ್ಷಗಳ ಬಳಿಕ ಐಸಿಸಿ ಏಕದಿನ ಪಂದ್ಯಾವಳಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್‌, ಭಾರತ ಮುಖಾಮುಖಿ

ದುಬೈನಲ್ಲಿ ಭಾನುವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್‌ನ್ನು ಎದುರಿಸಲಿದೆ. 

ಲಾಹೋರ್‌ನಲ್ಲಿ ಇಂದು (ಬುಧವಾರ) ನಡೆದ ಎರಡನೇ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂವು ದಕ್ಷಿಣ ಆಫ್ರಿಕಾವನ್ನು 50 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಇದರೊಂದಿಗೆ 25 ವರ್ಷಗಳ ನಂತರ ಐಸಿಸಿ ಏಕದಿನ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್‌ನನ್ನು ಎದುರಿಸಲಿದೆ. ನ್ಯೂಜಿಲೆಂಡ್ 2000ರಲ್ಲಿ ಐಸಿಸಿ ನಾಕೌಟ್ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿತ್ತು.