ಕೊವಿಡ್‌ ಟೆಸ್ಟ್‌ 'ನೆಗೆಟಿವ್'‌ ಸಿಎಂ ಯಡಿಯೂರಪ್ಪ ನಿರಾಳ

ಕೊವಿಡ್‌ ಟೆಸ್ಟ್‌ 'ನೆಗೆಟಿವ್'‌ ಸಿಎಂ ಯಡಿಯೂರಪ್ಪ ನಿರಾಳ

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೋವಿಡ್-19 ಟೆಸ್ಟ್ ವರದಿಯಲ್ಲಿ ನೆಗೆಟಿವ್ ಬಂದಿದ್ದು, ನಿರಾಳರಾಗಿದ್ದಾರೆ. 

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಕೆಲವು ಸಿಬ್ಬಂದಿಗೆ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ವೈದ್ಯಕೀಯ ತಪಾಸಣೆ ವೇಳೆ ಅವರಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್.ವೈ ಅವರಿಗೆ ಸೋಂಕು ಭೀತಿ ಎದುರಾಗಿತ್ತು. ಹೀಗಾಗಿ ಸಿಎಂ ಕೆಲ ದಿನಗಳಿಂದ ಮನೆಯಲ್ಲೇ ತಂಗಿದ್ದರು. 

ಸೋಂಕು ಭೀತಿ ಹಿನ್ನೆಲೆಯಲ್ಲಿ ಸಿಎಂ ಕೂಡ ಕೊರೊನಾ ಟೆಸ್ಟ್ ಗೆ ಒಳಪಟ್ಟಿದ್ದರು. ಈಗ ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಸಿಎಂ ಜೊತೆ ಸಂಪರ್ಕಕ್ಕೆ ಬಂದಿದ್ದ ಅಧಿಕಾರಿಗಳು, ನಿವಾಸದ ಸಿಬ್ಬಂದಿ, ಹಾಗೂ ಕುಟುಂಬ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ.