ಲಾಕ್​ಡೌನ್ ಬಗ್ಗೆ ಆರೋಗ್ಯ ಸಚಿವ ಸುಧಾಕರ ಸ್ಪಷ್ಟನೆ

ಲಾಕ್​ಡೌನ್ ಬಗ್ಗೆ ಆರೋಗ್ಯ ಸಚಿವ ಸುಧಾಕರ ಸ್ಪಷ್ಟನೆ

ಹಾವೇರಿ: ಕರ್ನಾಟಕದಲ್ಲಿ ಕೊವಿಡ್ 3ನೇ ಅಲೆಯ ಭೀತಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್​ಡೌನ್ ಹೇರಬಹುದು ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಸ್ಪಷ್ಟನೆ ನೀಡಿದ್ದಾರೆ. ಶಿಗ್ಗಾಂವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿ ಬುಧವಾರ ಮಾತನಾಡಿದ ಅವರು, 'ರಾಜ್ಯದಲ್ಲಿ ಹೊಸ ರೂಪಾಂತರಿಯ 2 ಪ್ರಕರಣ‌ಗಳು ಪತ್ತೆಯಾಗಿವೆ. ದೇಶದಲ್ಲಿ ಒಟ್ಟು 17 ಪ್ರಕರಣಗಳು ಪತ್ತೆಯಾಗಿವೆ. ರೂಪಾಂತರಿ ವೈರಾಣುಗಳನ್ನು ಎದುರಿಸಲು ರಾಜ್ಯದ ಆರೋಗ್ಯ ವ್ಯವಸ್ಥೆ ಸಜ್ಜಾಗಿದೆ. ಸದ್ಯ ರಾಜ್ಯದಲ್ಲಿ ಕಠಿಣ ಲಾಕ್​ಡೌನ್ ಹೇರುವ ಚಿಂತನೆ ಸರ್ಕಾರದ ಎದುರು ಇಲ್ಲ' ಎಂದು ಹೇಳಿದರು. ಕೊರೊನಾ ಎದುರಿಸಲು ಲಸಿಕೆ ಪಡೆಯುವುದೊಂದೇ ಪರಿಹಾರ. ಎರಡು ಲಸಿಕೆ ಪಡೆದಿದ್ದವರಿಗೆ ಹೆಚ್ಚು ಸಮಸ್ಯೆ ಆಗುವುದಿಲ್ಲ. ಡೆಲ್ಟಾ ವೆರಿಯಂಟ್ AY.4.2 ಥರದ 20 ರೂಪಾಂತರಗಳಿವೆ. ಈ ಬಗ್ಗೆ ತಜ್ಞರು ಈಗಾಗಲೇ ವರದಿಯನ್ನೂ ಕೊಟ್ಟಿದ್ದಾರೆ ಎಂದರು.