ಹಳೆಯ ಬಜೆಟ್ ಓದಿ ನಗೆಪಾಟಲಿಗೆ ಗುರಿಯಾದ ಸಿಎಂ - ಸದನದಲ್ಲಿ ಭಾರಿ ಕೋಲಾಹಲ

ಹಳೆಯ ಬಜೆಟ್ ಓದಿ ನಗೆಪಾಟಲಿಗೆ ಗುರಿಯಾದ ಸಿಎಂ - ಸದನದಲ್ಲಿ ಭಾರಿ ಕೋಲಾಹಲ

ರಾಜ್ಯಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಮೂರನೇ ಅವಧಿಯ ಕೊನೆಯ ಬಜೆಟ್​ ಅನ್ನು ಮಂಡಿಸಬೇಕಿತ್ತು, ಆದರೆ ವಿಧಾನಸಭೆಯಲ್ಲಿ ಹಳೆಯ ಬಜೆಟ್​ ಓದಿ ನಗೆಪಾಟಲಿಗೆ ಗುರಿಯಾದರು. ತಕ್ಷಣವೇ ಸಚಿವ ಮಹೇಶ್ ಜೋಶಿ ಗೆಹ್ಲೋಟ್​ರನ್ನು ಮಧ್ಯದಲ್ಲೇ ತಡೆದರು, ಇದರಿಂದ ಸದನದಲ್ಲಿ ಭಾರಿ ಕೋಲಾಹಲ ಉಂಟಾಯಿತು, ಕಲಾಪವನ್ನು ಮುಂದೂಡಲಾಯಿತು. 

ಮೊದಲ ಬಾರಿಗೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಜೆಟ್‌ನ್ನು ನೇರಪ್ರಸಾರ ಮಾಡಲಾಗುತ್ತಿತ್ತು. ರಾಜ್ಯದ ಜನಸಂಖ್ಯೆಯ ಶೇಕಡಾ 4 ರಷ್ಟಿರುವ ರಾಜ್ಯದ ಯುವಜನರ ಮತವನ್ನು ಗುರಿಯಾಗಿಟ್ಟುಕೊಂಡು ಗೆಹ್ಲೋಟ್ ಸರ್ಕಾರವು ಎಲ್ಲಾ ಕಾಲೇಜುಗಳಿಗೆ ಬಜೆಟ್‌ನ್ನು ನೇರಪ್ರಸಾರ ಮಾಡಲು ವ್ಯವಸ್ಥೆ ಮಾಡಲು ಸುತ್ತೋಲೆ ಹೊರಡಿಸಿತ್ತು. 

ಸುಮಾರು 7 ನಿಮಿಷಗಳ ಕಾಲ ಓದಿದ್ದರು, ಆಗ ಹಿಂದೆ ಕುಳಿತಿದ್ದ ಸಚಿವರು ಹಿಂದೆ ಬಂದು ಕಿವಿಯಲ್ಲಿ ಬಜೆಟ್​ ಮಂಡನೆ ನಿಲ್ಲಿಸುವಂತೆ ಹೇಳಿದರು. ತಕ್ಷಣ ದಿನಾಂಕ ನೋಡಿದ ಸಿಎಂ ಶಾಕ್ ಆಗಿದ್ದಾರೆ. ನಂತರ ಅವರೇ ನಗಲು ಪ್ರಾರಂಭಿಸಿದ್ದಾರೆ. ಬಜೆಟ್​ ಸೋರಿಕೆಯಾಗಿದೆ ಎಂದು ಈಗಾಗಲೇ ದಾಳಿ ನಡೆಸುತ್ತಿರುವ ಬಿಜೆಪಿ ಗದ್ದಲವನ್ನು ತೀವ್ರಗೊಳಿಸಿದರು. ಹಲವು ಬಾರಿ ಮನವಿ ಮಾಡಿದರೂ ಗದ್ದಲ ನಿಲ್ಲದ ಕಾರಣ ಕಲಾಪವನ್ನು ಅರ್ಧಗಂಟೆ ಮುಂದೂಡಲಾಯಿತು.