ಗೋಧಿ ರಫ್ತು ನಿಲ್ಲಿಸಿದ ಭಾರತ : ತುಟ್ಟಿಯಾದ ಗೋಧಿ

ಪ್ಯಾರಿಸ್: ಏರುತ್ತಿರುವ ದೇಶೀಯ ಬೆಲೆಗಳನ್ನು ನಿಯಂತ್ರಿಸಲು ಭಾರತವು ಶನಿವಾರದಂದು ತಕ್ಷಣದಿಂದ ಜಾರಿಗೆ ಬರುವಂತೆ ಗೋಧಿ ರಫ್ತುಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸದ್ಯ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ದಾಖಲೆಯ ಮಟ್ಟಕ್ಕೆ ಏರಿದೆ. ಯುರೋಪ್ ಮಾರುಕಟ್ಟೆ ಸೋಮವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಗೋಧಿ ಬೆಲೆ ಪ್ರತಿ ಟನ್ಗೆ 435 ಯುರೋಗಳಿಗೆ ($453) ಜಿಗಿಯಿತು.
ಈ ಹಿಂದೆ ಜಾಗತಿಕ ರಫ್ತಿನ ಶೇಕಡ 12 ರಷ್ಟನ್ನು ಹೊಂದಿದ್ದ ಕೃಷಿ ಶಕ್ತಿ ಕೇಂದ್ರವಾದ ಉಕ್ರೇನ್ ನ ಮೇಲೆ ರಷ್ಯಾ ಆಕ್ರಮಣದ ನಂತರ ಜಾಗತಿಕವಾಗಿ ಗೋಧಿ ಬೆಲೆ ಗಗನಕ್ಕೇರಿದೆ.ಗೊಬ್ಬರದ ಕೊರತೆ, ಕಳಪೆ ಫಸಲು ಮತ್ತು ಜಾಗತಿಕವಾಗಿ ಹಣದುಬ್ಬರದಿಂದ ಬೆಲೆ ಹೆಚ್ಚಾಗಿದೆ. ಇದು ಬಡ ದೇಶಗಳಲ್ಲಿ ಕ್ಷಾಮ ಮತ್ತು ಸಾಮಾಜಿಕ ಅಶಾಂತಿಯ ಭಯವನ್ನು ಹೆಚ್ಚಿಸಿದೆ.
ವಿಶ್ವದ ಎರಡನೇ ಅತಿದೊಡ್ಡ ಗೋಧಿ ಉತ್ಪಾದಕ ಭಾರತ ಮಾರ್ಚ್ ನಲ್ಲಿ ದಾಖಲೆಯ ಉಷ್ಣ ಅಲೆಯಿಂದಾಗಿ ಗೋಧಿ ರಫ್ತನ್ನು ನಿಷೇಧಿಸುತ್ತಿದೆ ಎಂದು ಶನಿವಾರ ಹೇಳಿತ್ತು.