ಮೇಕಪ್ ಆರ್ಟಿಸ್ಟ್ ಜೊತೆ 2ನೇ ಮದುವೆಯಾದ ಅರ್ಬಾಜ್ ಖಾನ್

ಮೇಕಪ್ ಆರ್ಟಿಸ್ಟ್ ಜೊತೆ 2ನೇ ಮದುವೆಯಾದ ಅರ್ಬಾಜ್ ಖಾನ್

ಸಲ್ಮಾನ್ ಖಾನ್ ಕಿರಿಯ ಸಹೋದರ ನಟ ಅರ್ಬಾಜ್ ಖಾನ್ ನಿನ್ನೆ (ಡಿಸೆಂಬರ್24) ರಂದು ತಮ್ಮ 56ನೇ ವಯಸ್ಸಿನಲ್ಲಿ 2ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ಅರ್ಬಾಜ್ ಮದುವೆ ನಡೆದಿದ್ದು, ಮುಂಬೈನಲ್ಲಿರುವ ಕುಟುಂಬದ ಸದಸ್ಯರು ಮತ್ತು ಆತ್ಮೀಯರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ರು. 

ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಭಾನುವಾರ ನಡೆದ ನಿಕಾಹ್ ಗಾಗಿ ವಧು ಶುರಾ ಕಾಣ್ ಲೈಟ್ ವೈಟ್ ಪೀಚ್ ಲೆಹೆಂಗಾ ಧರಿಸಿದ್ದರು. ಅರ್ಬಾಜ್ ಕೂಡ ಅಷ್ಟೇ ಗ್ರ್ಯಾಂಡ್ ಆಗಿರುವ ಕಾಸ್ಟ್ಯೂಮ್ ಹಾಕಿಕೊಂಡಿದ್ದರು. ತಮ್ಮ ಇನ್ಸ್ಟಾ ಪೇಜ್ ನಲ್ಲಿ ಮದುವೆ ಕುರಿತು ಅರ್ಬಾಜ್ ಬರೆದುಕೊಂಡಿದ್ದಾರೆ. 

ಮಲೈಕಾ ಅರೋರಾ ಜೊತೆ ಅರ್ಬಾಜ್ 1998ರಲ್ಲಿ ಮದುವೆ ಆಗಿದ್ದರು. ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡು ದೂರವಾದರು. 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಮಲೈಕಾ ಮತ್ತು ಅರ್ಬಾಜ್ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ನಂತರ ಅರ್ಬಾಜ್ ರೂಪದರ್ಶಿ ಜಾರ್ಜಿಯಾ ಜೊತೆ ಡೇಟ್ ಮಾಡುತ್ತಿದ್ದರು. ಆ ಸಂಬಂಧವೂ ಮುರಿದು ಬಿದ್ದಿತ್ತು. 

ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಬಾಜ್ ಖಾನ್ ಇದೀಗ ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಬಾಜ್ ಖಾನ್ ಅವರಿಗೂ ಮತ್ತು ಶುರಾ ಖಾನ್ ಅವರ ವಯಸ್ಸಿನ ಅಂತ ಬರೋಬ್ಬರಿ 22 ವರ್ಷ ಎಂದು ಹೇಳಲಾಗುತ್ತಿದೆ.