ಬೆಂಗಳೂರು: ಭಾರತಿ ವಿಷ್ಣುವರ್ಧನ್ ಮನೆಯಲ್ಲಿ ಮನೆ ಗೃಹ ಪ್ರವೇಶದ ಸಂಭ್ರಮ-ಶುಭ ಹಾರೈಸಿದ ಸಿಎಂ

ಬೆಂಗಳೂರು-ಇಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮನೆ ಗೃಹಪ್ರವೇಶ ನಡೆಯುತ್ತಿದೆ. ವಿಷ್ಣು ಕುಟುಂಬದ ಹೊಸ ಮನೆಗೆ 'ವಲ್ಮೀಕ' ಎಂಬ ಹೆಸರು ಇಟ್ಟಿದ್ದು, ಗೃಹಪ್ರವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ದಾರೆ. ಬೆಳಿಗ್ಗೆ 9ಕ್ಕೆ ಜಯನಗರದ ಮನೆಗೆ ಸಿಎಂ ಆಗಮಿಸಿದ್ದು, ಕಾರ್ಯಕ್ರಮ ಮುಗಿಸಿ ಸಿಎಂ ಚಿಕ್ಕಮಗಳೂರಿಗೆ ಹೊರಟ್ಟಿದ್ದಾರೆ.
ಭಾರತಿ ವಿಷ್ಣುವರ್ಧನ್ ಜಯನಗರದಲ್ಲಿ ಮನೆ ಕಟ್ಟಿಸಿದ್ದು,ಚಿತ್ರರಂಗದವರನ್ನೂ ವಿಷ್ಣು ಅಳಿಯ ಅನಿರುದ್ದ್ ಆಹ್ವಾನಿಸಿದ್ದಾರೆ.ವಿಷ್ಣುವರ್ಧನ್ ಕನಸಿನ ಮನೆ 'ವಲ್ಮೀಕ' ಗೆ ಚಿತ್ರರಂಗದ ಗಣ್ಯತಿಗಣ್ಯರು ಆಗಮಿಸಿ ಶುಭಾಶಯ ಹಾರೈಸಿದ್ದಾರೆ.
ಇನ್ನೂ ಇದೆ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಸಾಹಸಸಿಂಹ ನಮ್ಮ ಅಚ್ಚುಮೆಚ್ಚಿನ ನಟ.ವಿಷ್ಣುವರ್ಧನ್ ಮನೆ ತುಂಬಾ ಸುಂದರವಾಗಿದೆ.ಮೈಸೂರಿನಲ್ಲಿ ವಿಷ್ಣು ಸ್ಮಾರಕದ ಕೆಲಸಗಳು ನಡೀತಿವೆ.ಸದ್ಯದಲ್ಲೇ ವಿಷ್ಣು ಸ್ಮಾರಕದ ಉದ್ಘಾಟನೆ ಸಮಾರಂಭವಾಗುತ್ತೆ.ವಿಷ್ಣು ನಮ್ಮೆಲ್ಲರಿಗೂ ಮಾದರಿ ವ್ಯಕ್ತಿತ್ವ.ವಿಷ್ಣು ಘನತೆಯನ್ನ ಎತ್ತಿಹಿಡಿಯೋ ಮ್ಯೂಸಿಯಂ ಮಾಡ್ತೀವಿ.ಚಿಕ್ಕಮಗಳೂರಿಗೆ ಮಲೆನಾಡ ಸಮಸ್ಯೆಗಳನ್ನ ಗಮನಿಸೋಕೆ ಹೋಗ್ತಿದೀನಿ. ಶೃಂಗೇರಿಯಲ್ಲಿ ನಡೀತಿರೋ ಧರಣಿಯ ಬಗ್ಗೆಯೂ ಪ್ರಸ್ತಾಪ ಮಾಡ್ತೀನಿ ಎಂದು ಹೇಳಿದರು.