ಕೆಸಿಆರ್‌ಗೆ ಮತ್ತೊಂದು ಬಿಗ್‌ ಶಾಕ್ - ಬಿಆರ್‌ಎಸ್ ಸಂಸದ ಪೋತುಗಂಟಿ ರಾಮುಲು ಬಿಜೆಪಿ ಸೇರ್ಪಡೆ

ಕೆಸಿಆರ್‌ಗೆ ಮತ್ತೊಂದು ಬಿಗ್‌ ಶಾಕ್ - ಬಿಆರ್‌ಎಸ್ ಸಂಸದ ಪೋತುಗಂಟಿ ರಾಮುಲು ಬಿಜೆಪಿ ಸೇರ್ಪಡೆ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ನಾಯಕರ ವಲಸೆಯಿಂದ ಕಂಗಾಲಾಗಿರುವ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಕೆಸಿಆರ್ ಪಿಂಕ್ ಆರ್ಮಿಗೆ ಮತ್ತೊಂದು ಆಘಾತ ಎದುರಾಗಿದೆ. 

ಬಿಆರ್‌ಎಸ್ ಮುಖಂಡ ಮತ್ತು ನಾಗರ್‌ಕರ್ನೂಲ್ ಸಂಸದ ಪೋತುಗಂಟಿ ರಾಮುಲು ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದಲ್ಲದೆ ಆರ್ ಲೋಕನಾಥ್ ರೆಡ್ಡಿ, ಪೋತುಗಂಟಿ ಭರತ್ ಪ್ರಸಾದ್, ಜಕ್ಕಾ ರಘುನಂದನ ರೆಡ್ಡಿ, ಮೆಂಟಪಲ್ಲಿ ಪುರುಷೋತ್ತಮ ರೆಡ್ಡಿ ಸೇರಿದಂತೆ ಒಟ್ಟು 5 ಬಿಆರ್‌ಎಸ್ ಮುಖಂಡರು ಇಂದು ಬಿಜೆಪಿಗೆ ಸೇರ್ಪಡೆಯಾದರು.