ಹಿಂದಿ ಬಾಷೆ ಬೆಂಬಲಿಸಿದ ಆಂದ್ರ ಸಿಎಂ ಚಂದ್ರಬಾಬು ನಾಯ್ಡು

ಹಿಂದಿ ಬಾಷೆ ಬೆಂಬಲಿಸಿದ ಆಂದ್ರ ಸಿಎಂ ಚಂದ್ರಬಾಬು ನಾಯ್ಡು

ಅವರಾವತಿ: ಎಂಕೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ಭಾಷಾ ವಿವಾದದ ಬಗ್ಗೆ ಮಾತನಾಡಿ ಹಿಂದಿ ಭಾಷೆ ನಿರರ್ಗಳವಾಗಿ ಮಾತನಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳುವ ಮೂಲಕ ಹಿಂದಿ ಭಾಷೆಯನ್ನ ಬೆಂಬಲಿಸಿದ್ದಾರೆ. 

ಎಂಕೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ಭಾಷಾ ವಿವಾದದ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಸೋಮವಾರ ಪ್ರತಿಕ್ರಿಯಿಸಿ, ಮಾತೃಭಾಷೆಯಲ್ಲಿ ಅಧ್ಯಯನ ಮಾಡುವ ಜನರು ಮಾತ್ರ ಪ್ರಪಂಚದಾದ್ಯಂತ ಶ್ರೇಷ್ಠರಾಗಿದ್ದಾರೆ. ಇಂಗ್ಲಿಷ್ ಭಾಷೆ ಮಾತ್ರ ಜ್ಞಾನವನ್ನು ಖಾತರಿಪಡಿಸುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. "ರಾಷ್ಟ್ರೀಯ ಭಾಷೆ' (ಹಿಂದಿ)ದೆಹಲಿಯಲ್ಲಿ ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ.