ರೆಪೋ ದರ ಇಳಿಕೆ ಮಾಡಿದ ಆರ್‌ಬಿಐ

ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಇಳಿಕೆ ಮಾಡಿದೆ. ಇದರೊಂದಿಗೆ ಶೇ. 6ರಷ್ಟಿದ್ದ ರಿಪೋ ದರ ಶೇ. 5.50ಕ್ಕೆ ಇಳಿಕೆಯಾಗಿದೆ. ಆರ್ಬಿಐ ಸತತ ಮೂರನೇ ಬಾರಿ ರಿಪೋ ದರ ಇಳಿಕೆ ಮಾಡಿದೆ. ಫೆಬ್ರುವರಿ ಮತ್ತು ಏಪ್ರಿಲ್ ತಿಂಗಳಲ್ಲಿ ತಲಾ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಸಲಾಗಿತ್ತು.
ಈ ಮೂಲಕ ಆರ್‌ಬಿಐ ಸಾಲಗಾರರಿಗೆ ಸಿಹಿಸುದ್ದಿ ನೀಡಿದೆ. ರೆಫೋ ದರದಲ್ಲಿನ ಕಡಿತದಿಂದಾಗಿ, ಗೃಹ ಸಾಲಗಳು ಸೇರಿದಂತೆ ಎಲ್ಲಾ ಸಾಲಗಳು ಅಗ್ಗವಾಗಲಿದೆ.
ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ರಿಪೋ ದರ ಇಳಿಸುವ ನಿರ್ಧಾರಕ್ಕೆ ಪ್ರಮುಖ ಕಾರಣವನ್ನೂ ಹೆಸರಿಸಿದ್ದಾರೆ. ಹಣದುಬ್ಬರ ನಿಯಂತ್ರಣದಲ್ಲಿರುವುದರಿಂದ ಆರ್ಬಿಐಗೆ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿದೆ. ಜಾಗತಿಕ ಅನಿಶ್ಚಿತ ವಾತಾವರಣದಿಂದ ಹಿನ್ನಡೆಯಲ್ಲಿರುವ ಆರ್ಥಿಕತೆಗೆ ರಿಪೋ ದರ ಇಳಿಕೆಯು ಪುಷ್ಟಿ ಕೊಡುವ ನಿರೀಕ್ಷೆ ಇದೆ.
ಇನ್ನೂ ಭಾರತದ ಆರ್ಥಿಕತೆ ಈ ವರ್ಷ (2025-26) ಶೇ. 6.5ರಷ್ಟು ಹೆಚ್ಚಬಹುದು ಎಂದ ಗವರ್ನರ್, ಹಣದುಬ್ಬರವು ಈ ವರ್ಷ ಶೇ. 3.7ರಷ್ಟು ಇರುವ ಸಾಧ್ಯತೆ ಇದೆ ಎಂದಿದ್ದಾರೆ.