ರಾಷ್ಟ್ರ ರಾಜಧಾನಿಯಲ್ಲಿ ಪ್ರಭಲ ಭೂಕಂಪ

ನವದೆಹಲಿ : ದೆಹಲಿ-ಎನ್.ಸಿ.ಆರ್. ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ ಸೇರಿದಂತೆ ಹಲವು ಕಡೆ ಭೂಕಂಪ ಉಂಟಾಗಿದ್ದು, ಕೆಲ ಸೆಕೆಂಡ್ ಭೂಮಿ ನಡುಗಿದ ಅನುಭವವಾಗಿದೆ.
ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.1 ರಷ್ಟು ದಾಖಲಾಗಿದೆ. ಬೆಳಗ್ಗೆ 9 ಗಂಟೆ 4 ನಿಮಿಷದ ಸುಮಾರಿಗೆ ದೆಹಲಿಯ ಸುತ್ತಮುತ್ತ ಭೂಮಿ ಕಂಪಿಸಿದೆ. ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪದ ಪರಿಣಾಮವಾಗಿ ಕಟ್ಟಡಗಳು ನಡುಗಿದವು ಮತ್ತು ನಿವಾಸಿಗಳು ಹೊರಗೆ ಓಡುವಂತೆ ಮಾಡಲಾಯಿತು, ಆದರೆ ಹಾನಿ ಅಥವಾ ಗಾಯಗಳ ಬಗ್ಗೆ ತಕ್ಷಣದ ವರದಿಗಳಿಲ್ಲ.