ಮೋದಿ 3.0 ಸರ್ಕಾರದಿಂದ ಗುಡ್ ನ್ಯೂಸ್ : ಗ್ಯಾಸ್ ಸಿಲಿಂಡರ್ ದರ ಇಳಿಕೆ

ಮೋದಿ 3.0 ಸರ್ಕಾರದಿಂದ ಗುಡ್ ನ್ಯೂಸ್ : ಗ್ಯಾಸ್ ಸಿಲಿಂಡರ್ ದರ ಇಳಿಕೆ

ನವದೆಹಲಿ : ದೇಶದ ಜನತೆಗೆ ಜುಲೈ ತಿಂಗಳ ಮೊದಲ ದಿನವೇ ಸಿಹಿ ಸುದ್ದಿ ಸಿಕ್ಕಿದೆ. ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್.ಪಿ.ಜಿ. ದರದಲ್ಲಿ ಮೊದಲ ಬಾರಿಗೆ ಇಳಿಕೆಯಾಗಿದೆ. 

ವಾಣಿಜ್ಯ ಬಳಕೆ ಸಿಲಿಂಡರ್ ದರವನ್ನು 31 ರೂಪಾಯಿ ಇಳಿಕೆ ಮಾಡಲಾಗಿದೆ. ಗೃಹಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 19 ಕೆಜಿ ಸಿಲಿಂಡರ್ ದರ ಬೆಂಗಳೂರಲ್ಲಿ 1724 ಇದೆ. ದೆಹಲಿಯಲ್ಲಿ 1745 ರೂ., ಮುಂಬೈನಲ್ಲಿ 1698 ರೂ. ಇದೆ. 

ಕಳೆದ ತಿಂಗಳು ವಾಣಿಜ್ಯ ಬಳಕೆ ಸಿಲಿಂಡರ್ ದರ 72 ರೂ. ಕಡಿತ ಮಾಡಲಾಗಿತ್ತು. ಈಗ 31 ರೂ. ಇಳಿಕೆಯಾಗಿದೆ ತೈಲ ಕಂಪನಿಗಳು ದರ ಪರಿಷ್ಕರಿಸಿದ್ದು, ಇಂದಿನಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.