ಲಾಕ್ ಡೌನ್ ವದಂತಿ ಹಬ್ಬಿಸಿದ್ರೆ ಶಿಸ್ತು ಕ್ರಮ : ಸುಧಾಕರ್

ಲಾಕ್ ಡೌನ್ ವದಂತಿ ಹಬ್ಬಿಸಿದ್ರೆ ಶಿಸ್ತು ಕ್ರಮ : ಸುಧಾಕರ್

ಬೆಂಗಳೂರು: ಎಲ್ಲವೂ ಸಹಜ ಸ್ಥಿತಿಗೆ ಬರುವಷ್ಟರಲ್ಲಿ ಮತ್ತೊಂದು ವೈರಸ್ ಲಗ್ಗೆ ಇಟ್ಟು ಜನರನ್ನು ಕಂಗಾಲಾಗಿಸಿದೆ. ಇದರ ಮಧ್ಯೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಎನ್ನುವ ಸದ್ದು ಹೆಚ್ಚಾಗುತ್ತಿದ್ದು ಜನ ಆತಂಕ್ಕೀಡಾಗಿದ್ದಾರೆ.ಈ ಕುರಿತು ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ರಾಜ್ಯದಲ್ಲಿ ಯಾವುದೇ ಲಾಕ್ ಡೌನ್ ಇಲ್ಲ. ವದಂತಿ ಹಬ್ಬಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಕೊರೊನಾ ಹೊಸ ತಳಿ ಓಮಿಕ್ರಾನ್ ಭೀತಿ ಶುರುವಾಗಿದ್ದು, ಜಿನೋಮಿಕ್ ಸೀಕ್ವೆನ್ಸ್ ವರದಿ ಬರುವುದಕ್ಕೆ ಇನ್ನೂ ಒಂದು ವಾರ ಬೇಕಾಗುತ್ತದೆ. ಡಿಸೆಂಬರ್ 1 ರಂದು ನಮಗೆ ವರದಿ ಬರುತ್ತದೆ. ಈಗಾಗಲೇ 12 ದೇಶಗಳಲ್ಲಿ ಹೊಸ ವೈರಸ್ ಪತ್ತೆಯಾಗಿದೆ. ಅಂತರಾಷ್ಟ್ರೀಯ ವಿಮಾನಗಳ ಮೂಲಕ ರಾಜ್ಯಕ್ಕೆ ಪ್ರಯಾಣಿಕರು ಬರುತ್ತಿದ್ದಾರೆ. ಎಲ್ಲರನ್ನೂ ಸಹ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 12-13 ದಿನಗಳಿಂದ ಬಂದವರ ಮೇಲೆ ನಿಗಾ ಇಡಲಾಗಿದ್ದು, ಅವರ ಫೋನ್ ನಂಬರ್ ರನ್ನು ಟ್ರೇಸ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.