ಮಹಾರಾಷ್ಟ್ರದಲ್ಲಿ 3.3 ತೀವ್ರತೆಯ ಭೂಕಂಪ

ಸತಾರಾ: ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಭೂಮಿ ಸೋಮವಾರ ತಡರಾತ್ರಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.3 ಭೂಕಂಪನ ತೀವ್ರತೆ ದಾಖಲಾಗಿದೆ.
ಈ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅಧಿಕೃತ ಮಾಹಿತಿ ನೀಡಿದೆ ಸತಾರಾ ಜಿಲ್ಲೆಯಲ್ಲಿ ರಾತ್ರಿ 11.36ಕ್ಕೆ ಭೂಮೇಲ್ಮೈಯಿಂದ 5 ಕಿ.ಮೀ ಆಳದಲ್ಲಿ 3.3 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು NCS ʻXʼ ಪೋಸ್ಟ್‌ನಲ್ಲಿ ತಿಳಿಸಿದೆ..