ಧಾರವಾಡ: ಮತದಾನ ಜಾಗೃತಿಗಾಗಿ ವಿವಿಧ ಸ್ಪರ್ಧೆಗಳ ಆಯೋಜನೆ

ಧಾರವಾಡ: ಮತದಾನ ಜಾಗೃತಿಗಾಗಿ ವಿವಿಧ ಸ್ಪರ್ಧೆಗಳ ಆಯೋಜನೆ

ಧಾರವಾಡ: ಭಾರತ ಚುನಾವಣಾ ಆಯೋಗವು ರಾಷ್ಟ್ರೀಯ ಮತದಾರರ ಜಾಗೃತಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದೆ. ನನ್ನ ಮತವು ನನ್ನ ಭವಿಷ್ಯ ಒಂದು ಮತದ ಶಕ್ತಿ ಶೀರ್ಷಿಕೆಯಡಿ ರಸಪ್ರಶ್ನೆ, ವೀಡಿಯೋ ತಯಾರಿಕೆ, ಗಾಯನ, ಭಿತ್ತಿ ಚಿತ್ರ ಹಾಗೂ ಘೋಷ ವಾಕ್ಯ ಬರೆಯುವ ಸ್ಪರ್ಧೆಗಳು ನಡೆಯುತ್ತಿವೆ, ಆಸಕ್ತರು ಭಾಗವಹಿಸಲು ಮಾರ್ಚ್ 15 ರವರೆಗೆ ಅವಕಾಶವಿದೆ. ಸಾಂಸ್ಥಿಕ, ವೃತ್ತಿಪರ, ಹವ್ಯಾಸಿ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಅತ್ಯಾಕರ್ಷಕ ಬಹುಮಾನಗಳಿವೆ. ecisveep.nic.in ವೆಬ್‌ಸೈಟ್ ಮೂಲಕ ಅಥವಾ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಎಲ್ಲಾ ವಯೋಮಾನದವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ನಿಮ್ಮ ಪ್ರವೇಶಗಳನ್ನು voter-contest@eci.gov.in ಇಮೇಲ್ ವಿಳಾಸಕ್ಕೆ ಕಳುಹಿಸಬಹುದು.