ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ 29 ಜನ ಅಭ್ಯರ್ಥಿಗಳಿಂದ 44 ನಾಮಪತ್ರಗಳು ಸಲ್ಲಿಕೆ

ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ 29 ಜನ ಅಭ್ಯರ್ಥಿಗಳಿಂದ 44 ನಾಮಪತ್ರಗಳು ಸಲ್ಲಿಕೆ

ಧಾರವಾಡ: ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಏ.12 ರಿಂದ ಏ.19 ರವರೆಗೆ ರಜಾ ದಿನಗಳನ್ನು ಹೊರತುಪಡಿಸಿ, ಆರು ದಿನಗಳಲ್ಲಿ ಒಟ್ಟು 29 ಜನ ಅಭ್ಯರ್ಥಿಗಳಿಂದ 44 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ಲೋಕಸಭೆ ಮತಕ್ಷೇತ್ರಕ್ಕೆ ಏ.12 ರ ಮೊದಲ ದಿನ ಒಬ್ಬ ಅಭ್ಯರ್ಥಿಯಿಂದ ಒಂದು ನಾಮಪತ್ರ, ಏ.15 ರ ಎರಡನೇಯ ದಿನದಂದು ಐದು ಜನ ಅಭ್ಯರ್ಥಿಗಳಿಂದ 11 ನಾಮಪತ್ರಗಳು, ಏ.16 ರ ಮೂರನೇಯ ದಿನದಂದು ನಾಲ್ಕು ಜನ ಅಭ್ಯರ್ಥಿಗಳಿಂದ 9 ನಾಮಪತ್ರಗಳು, ಏ.17 ರ ನಾಲ್ಕನೇಯ ದಿನದಂದು ನಾಲ್ಕು ಜನ ಅಭ್ಯರ್ಥಿಗಳಿಂದ ಐದು ನಾಮಪತ್ರಗಳು, ಏ.18 ರ ಐದನೇಯ ದಿನದಂದು ನಾಲ್ಕು ಜನ ಅಭ್ಯರ್ಥಿಗಳಿಂದ ಆರು ನಾಮಪತ್ರಗಳು ಮತ್ತು ಏ.19 ರ ಆರನೇಯ ದಿನವಾದ ಇಂದು ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 11 ಜನ ಅಭ್ಯರ್ಥಿಗಳಿಂದ 12 ನಾಮಪತ್ರಗಳು ಸಲ್ಲಿಕೆ ಆಗಿವೆ. 
ಒಟ್ಟು 29 ಜನ ಅಭ್ಯರ್ಥಿಗಳಿಂದ 44 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ಅವರು ತಿಳಿಸಿದ್ದಾರೆ. 

ನಾಳೆ ಏ.20 ರಂದು ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯ ಜರುಗಲಿದೆ ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.