SSLC ಫಲಿತಾಂಶ ರಾಜ್ಯಕ್ಕೆ ಪ್ರಥಮ ಚಿಕ್ಕಮಂಗಳೂರಿನ ಕುವರಿ ತನ್ಮಯಿ

ಚಿಕ್ಕಮಗಳೂರು : ಕಾಫಿನಾಡಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ತನ್ಮಯಿ ಪಿ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಚಿಕ್ಕಮಗಳೂರಿನ ನಗರದ ಸೈಂಟ್ ಜೋಸೆಫ್ ಬಾಲಕಿಯರ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಅವರು ನಗರದ ಇಂದಾವರ ನಿವಾಸಿ ವಸ್ತಾರೆ ಉಪತಹಶೀಲ್ದಾರ ಐ.ಎಸ್. ಪ್ರಸನ್ನ ಮತ್ತು ಸರಕಾರಿ ಶಾಲಾ ಶಿಕ್ಷಕಿ ಡಿ.ಎಲ್ ಸಂಧ್ಯಾ ದಂಪತಿಯ ಪುತ್ರಿ.
ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಬಂದಿದ್ದು ನನಗೆ ತುಂಬಾ ಖುಷಿಯಾಗಿದೆ. ಕಷ್ಟಪಟ್ಟು ಓದಿದಕ್ಕೆ ಸಾರ್ಥಕವಾಯ್ತು.
ನಾನು ಯಾವುದೇ ಟ್ಯೂಷನ್ ಪಡೆದುಕೊಂಡಿಲ್ಲ. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಆನ್ ಲೈನ್ ಪಾಠ ಕೇಳುತ್ತಿದ್ದೆ.
ಮರೆತ ವಿಷಯಗಳು ಜ್ಞಾಪಕಕ್ಕೆ ಬರುತ್ತಿತ್ತು. ಇದರಿಂದ ಬಹಳ ಉಪಯೋಗವಾಯ್ತು ಎಂದಿದ್ದಾಳೆ ತನ್ಮಯಿ.