ಬೆಂಗಳೂರು : ಚಾಲಕರೇ ಗಮನಿಸಿ! ಚುನಾವಣೆ ದಿನ ಬೆಳಗ್ಗೆ ಮತದಾನ ಮಾಡಿದ ಬಳಿಕ ಮಧ್ಯಾಹ್ನ ವಾಹನ ಚಲಾಯಿಸಬೇಕು

ಬೆಂಗಳೂರು : ಚಾಲಕರೇ ಗಮನಿಸಿ! ಚುನಾವಣೆ ದಿನ ಬೆಳಗ್ಗೆ ಮತದಾನ ಮಾಡಿದ ಬಳಿಕ ಮಧ್ಯಾಹ್ನ ವಾಹನ ಚಲಾಯಿಸಬೇಕು

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆ ಇದೇ 26 ರಂದು ರಾಜ್ಯದ ಮೊದಲ ಹಂತದ ಮತದಾನ ಇರೋದು ಎಲ್ಲರಿಗೂ ತಿಳಿದ ಸಂಗತಿಯೇ.‌ ಆದರೆ, ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕ್ಷೀಣಿಸುತ್ತಿರೋ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಬಿಬಿಎಂಪಿ ಮುಖ್ಯ ಆಯುಕ್ತರು ಆಗಿರುವ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ವಾಹನ ಚಾಲಕರಿಗೆ ಸಂಬಂಧಿಸಿದಂತೆ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. 

26 ರಂದು ಚಾಲಕರಾದೋರು ಬೆಂಗಳೂರಿನಿಂದ ಎಲ್ಲಿಗೇ ಹೊರಡುವುದಿದ್ದರೂ ತಮ್ಮ ಅಮೂಲ್ಯವಾದ ಮತವನ್ನು‌ ಹಾಕಿಯೇ ಮುಂದುವರಿಯಬೇಕು. ಬೆಳಗ್ಗೆ ಮತದಾನದ ಮಾಡಿದ ಬಳಿಕ ಮಧ್ಯಾಹ್ನ ತಮ್ಮ ಕೆಲಸದಲ್ಲಿ ಮುಂದುವರಿಯಬಹುದು ಅಂತಾ ಸುತ್ತೋಲೆಯಲ್ಲಿ ತಿಳಿಸಲಾಗಿದೆ.