ಶಾಸಕ ಪ್ರಸಾದ ಅಬ್ಬಯ್ಯ ಆಪ್ತ ಸಹಾಯಕರ ವರದಿ ನೆಗಟಿವ್

ಹುಬ್ಬಳ್ಳಿ: ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಅವರ ಮೂವರು ಆಪ್ತ ಸಹಾಯಕರ ಕೋವಿಡ್-19 ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಸಮಾಧಾನ ಹಾಗೂ ನಿರಾಳತೆ ಮೂಡಿದೆ.
ಕಳೆದ ಸೋಮವಾರ ಮೂಗು ಹಾಗೂ ಗಂಟಲು ದ್ರವದ ಪರೀಕ್ಷೆ ಮಾಡಿಸಿಕೊಂಡಿದ್ದು, ಶುಕ್ರವಾರ ಎಲ್ಲರ ವರದಿ ನೆಗೆಟಿವ್ ಬಂದಿದೆ. ಅಲ್ಲದೇ, ಇತ್ತೀಚೆಗಷ್ಟೇ ಇಬ್ಬರೂ ಗನ್ ಮ್ಯಾನ್ ಗಳ ವರದಿಯೂ ನೆಗೆಟಿವ್ ಬಂದಿತ್ತು.
ಶಾಸಕರಿಗೆ ಸೋಂಕು ದೃಢಪಟ್ಟಿದ್ದರಿಂದ ಅವರ ಸಂಪರ್ಕದಲ್ಲಿದ್ದವರಿಗೆ ಆತಂಕ ಶುರುವಾಗಿತ್ತು. ಆದ್ರೆ ಅವರ ಪ್ರಾಥಮಿಕ ಸಂಪರ್ಕಿಥಿಗೂ ನೆಗಟಿವ್ ಬಂದಿದ್ದು ನಿಟ್ಟುಸಿರು ಬಿಡುವಂತೆ ಮಾಡಿದೆ.