ಉತ್ತರಾಖಂಡ್​ನಲ್ಲಿ ಭೀಕರ ಮಳೆಗೆ 42 ಮಂದಿ ಸಾವು

ಉತ್ತರಾಖಂಡ್​ನಲ್ಲಿ ಭೀಕರ ಮಳೆಗೆ 42 ಮಂದಿ ಸಾವು

ಡೆಹ್ರಾಡೂನ್: ವರುಣನ ಆರ್ಭಟಕ್ಕೆ ಉತ್ತರಾಖಂಡ್ ನಲುಗಿ ಹೋಗಿದೆ. ಮಳೆರಾಯನ ಆರ್ಭಟ ಎಲ್ಲೆ ಮೀರಿದ್ದು, ಜನರು ಪ್ರವಾಹದ ಭೀಕರತೆಗೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ನಿರಂತರ ಮಳೆಯಿಂದಾಗಿ ಈವರೆಗೂ 42ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಅನೇಕ ಮಂದಿ ನಾಪತ್ತೆಯಾಗಿದ್ದಾರೆ. ಈ ಪ್ರವಾಹದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಹಾಗೂ ಮನೆ ಕಳೆದುಕೊಂಡವರಿಗೆ 1.9 ಲಕ್ಷ ರೂ. ಪರಿಹಾರ ನೀಡುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘೋಷಣೆ ಮಾಡಿದ್ದಾರೆ. ಜಾನುವಾರು ಕಳೆದುಕೊಂಡವರಿಗೆ ಅಗತ್ಯ ನೆರವು ಭರವಸೆಯನ್ನೂ ರಾಜ್ಯ ಸರ್ಕಾರ ನೀಡಿದೆ. ಸದ್ಯಕ್ಕೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ 15 ಎನ್​ಡಿಆರ್​ಎಫ್​ ತಂಡ ನಿಯೋಜನೆ ಮಾಡಿದ್ದು, ಕಾರ್ಯಾಚರಣೆ ನಡೆಸಲಾಗುತ್ತಿದೆ.