ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲಿ ವಖ್ಫ್ ಅದಾಲತ್! -ವಕ್ಫ್ ಆಸ್ತಿಗಳ ಒತ್ತುವರಿ ತೆರವಿಗೆ ಸರ್ಕಾರ ಕ್ರಮ

ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲಿ ವಖ್ಫ್ ಅದಾಲತ್! -ವಕ್ಫ್ ಆಸ್ತಿಗಳ ಒತ್ತುವರಿ ತೆರವಿಗೆ ಸರ್ಕಾರ ಕ್ರಮ

ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ವಖ್ಫ್ ಅದಾಲತ್ ನಡೆಸಲಾಗುವುದು ಎಂದು ವಖ್ಫ್ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. 

 

ಬುಧವಾರ ವಖ್ಫ್ ಬೋರ್ಡ್ ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ವಖ್ಫ್ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು. 

 

ಪ್ರತಿ ಜಿಲ್ಲೆಯಲ್ಲಿರುವ ವಖ್ಫ್ ಆಸ್ತಿ ಗಳು, ಒತ್ತುವರಿ ಪ್ರಮಾಣ, ನ್ಯಾಯಾಲಯದಲ್ಲಿರುವ ಪ್ರಕರಣ ಗಳು ಸೇರಿದಂತೆ ಮತ್ತಿತರ ಅಂಶಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯಲಾಗುವುದು. ವಖ್ಫ್ ವ್ಯಾಪ್ತಿಯ ಆಸ್ತಿ ಒತ್ತುವರಿ ತೆರವು ಹಾಗೂ ನ್ಯಾಯಾಲಯ ದಲ್ಲಿರುವ ಪ್ರಕರಣ ಗಳ ತ್ವರಿತ ಇತ್ಯರ್ಥ ಹಾಗೂ ಇರುವ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು. ವಖ್ಫ್ ವ್ಯಾಪ್ತಿಯಲ್ಲಿ ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಎಷ್ಟೆಷ್ಟು ಆಸ್ತಿ ಬಾಡಿಗೆ, ಲೀಸ್ ಆಧಾರದಲ್ಲಿ ನೀಡಲಾಗಿದೆ, ಲೀಸ್ ಅವಧಿ ಮುಗಿದಿರುವ ಪ್ರಕರಣಗಳು ಎಷ್ಟು? ವಕ್ಫ್ ಆಸ್ತಿಗಳಿಗೆ ಪ್ರಸ್ತುತ ಎಷ್ಟು ಬಾಡಿಗೆ ಬರುತ್ತಿದೆ? ಎಂಬ ಸಂಪೂರ್ಣ ವಿವರವನ್ನು ಸಿದ್ದಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು. 

ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಕಾರ್ಯನಿವಾಹಕ ಅಧಿಕಾರಿ ಖಾನ್ ಫರ್ವೇಜ್ ಸೇರಿ ಮತ್ತಿತೃಉ ಉಪಸ್ಥಿತರಿದ್ದರು.