ಹುಬ್ಬಳ್ಳಿ: ಮೀಸಲಾತಿಗಾಗಿ ಡಿಸೆಂಬರ್ 10ರಂದು ಸುವರ್ಣ ಸೌಧದ ಮುಂದೆ ಉಗ್ರ ಹೋರಾಟಕ್ಕೆ ಮೃತ್ಯುಂಜಯ ಸ್ವಾಮೀಜಿ ಕರೆ
ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ವಿಚಾರ, ಮೀಸಲಾತಿ ನೀಡಲು ಸರ್ಕಾರ ಹಿಂದೇಟು ಹಾಡುತ್ತಿದೆ. ಹೋರಾಟಕ್ಕೆ ಈ ಹಿಂದಿನ ಸರ್ಕಾರ ಗೆಜೆಟ್ ಕೂಡಾ ಹೊರಡಿಸಿತ್ತು. ಆದರೆ ನೀತಿ ಸಂಹಿತೆ ಮುಂದಿನ ಕಾರ್ಯಕ್ಕೆ ತೊಂದರೆ ಆಯಿತು. ಸದ್ಯ ರಾಜ್ಯ ಸರ್ಕಾರ ಏನು ಮಾಡುತ್ತಿಲ್ಲ. ಡಿಸೆಂಬರ್ 10ರಂದು ಬೆಳಗಾವಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆ ಮಾತನಾಡಿದ ಅವರು, ಈ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ವಕೀಲರ ನೇತೃತ್ವದಲ್ಲಿ ಮುತ್ತಿಗೆ ಹಾಕುವ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಾಗಿದೆ.ಯಾವುದಕ್ಕೂ ಬಗ್ಗದೆ ಜಗ್ಗದೆ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುತ್ತೇವೆ.
ನಮಗೆ ನ್ಯಾಯ ಸಿಗುವವರೆಗೂ ಸುವರ್ಣ ವಿಧಾನ ಸೌಧ ದ ಮುಂದೆ ಹೋರಾಟ ನಡೆಯಲಿದೆ. ಏನಾದರೂ ವ್ಯತ್ಯಾಸಗಳಾದರೆ ಏನಾದರೂ ಅನಾಹುತ ಗಳಾದರೆ ಸರ್ಕಾರವೇ ನೇರ ಹೊಣೆ ಜವಾಬ್ದಾರಿ. ರಾಜ್ಯದ ಮೂಲೆ ಮೂಲೆಗಳಿಂದ ಈ ಒಂದು ಬೃಹತ್ ಪ್ರಮಾಣದ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ. ನಾಳೆಯಿಂದ ನಾನು ಕೂಡಾ ರಾಜ್ಯಾದ್ಯಂತ ಪ್ರವಾಸ ಮಾಡಿ ಈ ಒಂದು ವಿಚಾರ ದಲ್ಲಿ ಸಂಘಟನೆ ಮಾಡುತ್ತೇನೆ ಎಂದ ಜಯ ಮೃತ್ಯುಂಜಯ ಸ್ವಾಮೀಜಿ.